- ವೀರನಗೌಡ ಪಾಟೀಲ
( ಬಸ್ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ಪತ್ರಿಕೆ ಓದುತ್ತಾ ಕುಳಿತಿದ್ದಾನೆ. )
ಪ್ರಯಾಣಿಕ : ಓಹೋ...ಇವತ್ತು ಶುಕ್ರವಾರ ಪತ್ರಿಕೆಯಲ್ಲಿ ಸಿನಿಮಾ ಸುದ್ದಿನೇ ಹೆಚ್ಚು. ಯಾರು-ಯಾವ ಹೊಸ ಸಿನಿಮಾ ಮಾಡ್ತಾ ಇದ್ದಾರೆ? ಯಾವ ಸಿನಿಮಾ ಚಿತ್ರೀಕರಣ ಮುಗಿಯಿತು? ಯಾವ ಸಿನಿಮಾ ಎಲ್ಲೆಲ್ಲಿ ಬಿಡುಗಡೆ ಆಯಿತು-ನೋಡೋಣ.
( ಹಳ್ಳಿಯ ವ್ಯಕ್ತಿಯೊಬ್ಬ ಕೈಯಲ್ಲಿ ಮೊಬೈಲ್ ಹಿಡಿದು,ಅದನ್ನು ನೋಡುತ್ತ ; ಮಾತನಾಡಿಕೊಳ್ಳುತ್ತಾ ಬಸ್ ನಿಲ್ದಾಣಕ್ಕೆ ಬರುತ್ತಾನೆ. )
ಹಳ್ಳಿಯ ವ್ಯಕ್ತಿ : ನನ್ನ ಹುಡಗಿಗೆ ಪೋನ್ ಮಾಡಿ, ಅವ ಯಾರ ತೊಂದರಿ ಕೊಡಾಕತ್ಯಾನಂತ ಅವ ಯಾರ ಅಂತ ಒಂದ ಕೈ ನೋಡಕೆಬೇಕ ಇವತ್ತು ನನ್ನ ನಂಬರಿಂದ ಎಷ್ಟ ಪೋನ್ ಮಾಡಿದ್ರೂ ಫೋನ್ ತೆಗೀವಲ್ಲಾ ಅದಕ್ಕ-ಈಗ ನನ್ನ ಹುಡುಗಿ ಪೋನ್ ನಿಂದಾ ಹಚ್ಚತನಿ ಅಕಿನ ನಂಬರ ನೋಡಿದರ ರಿಸೀವ್ ಮಾಡ್ತಾನ ಆವಾಗ ಐತಿ ಅವಂಗ ಮಾರಿಹಬ್ಬ.
ಪ್ರಯಾಣಿಕ : ( ಪತ್ರಿಕೆ ಓದುತ್ತಾ )ಏ!! ಪುಂಡಪೋಕರಿ. ( ತಕ್ಷಣ ಹಳ್ಳಿಯ ವ್ಯಕ್ತಿ ಕೋಪದಿಂದ ಪ್ರಯಾಣಿಕನತ್ತ ನೋಡುತ್ತಾನೆ. )
ಪ್ರಯಾಣಿಕ : ( ಆಶ್ಚರ್ಯದಿಂದ ) ಸಿನಿಮಾಗೆ ಈ ರಿತಿಯು ಹೆಸರಿಡತಾರಾ? ಛೆ! ಎಂಥಾ ಕಾಲ ಬಂತು ರೀ.
ಹಳ್ಳಿಯ ವ್ಯಕ್ತಿ : ( ಸಮಾಧಾನಗೊಂಡು ಮೊದಲಿನ ಕಡೆಗೆ ತಿರುಗಿ ) ಇವತ್ತು ನೀನ್ಯಾರ ಅಂತಾ ಗೊತ್ತಾಗಲಿ; ಆವಾಗ ಐತಿ ನಿನಗ. (ಮತ್ತೆ ಫೋನನ್ನು ಕಿವಿಯ ಬಳಿ ಹಿಡಿದುಕೊಂಡು.. ) ಹಲೋ..
ಪ್ರಯಾಣಿಕ : ಹಾಯ್ ಚಿನ್ನು; ಹೇಗಿದ್ದೀಯಾ?
ಹಳ್ಳಿಯ ವ್ಯಕ್ತಿ : ( ಆಶ್ಚರ್ಯದಿಂದ ) ಹಾಂ.! ಚಿನ್ನುನಾ ? ಏಯ್ ಯಾರೊ ನೀನು?
ಪ್ರಯಾಣಿಕ : ( ಹಳ್ಳಿಯ ವ್ಯಕ್ತಿಯನ್ನು ನೋಡುತ್ತಾ ) ಏ ಪೆದ್ದ.
ಹಳ್ಳಿಯ ವ್ಯಕ್ತಿ : ಆಂ! ನನಗೆ ಪೆದ್ದಾ ಅಂತಿಯಾ? ಯಾರ ನೀನ? ಯಾ ಊರ ನಿಂದ?
ಪ್ರಯಾಣಿಕ : ಏ ದಡ್ಡ.
ಹಳ್ಳಿಯ ವ್ಯಕ್ತಿ : ಏ! ಮರ್ಯಾದಿಯಿಂದ ನೀ ಎಲ್ಲಿ ಅದಿ ಹೇಳ. ಹೇಳಲಿಲ್ಲಾಂದ್ರ ಹುಡುಕ್ಕೆಂದ್ ಬಂದ್ ಹೊಡಿತೆನಿ.
ಪ್ರಯಾಣಿಕ : ಸಾರ್
ಹಳ್ಳಿಯ ವ್ಯಕ್ತಿ : ( ಆಶ್ಚರ್ಯದಿಂದ ) ಆಂ!! ಸಾರಾ? ಆಲಾಲಾಲಾಲಾ ಲಾ.... ಹುಡುಕ್ಕೆಂದ್ ಬಂದ್ ಹೊಡಿತೆನಿ ಅಂದ್ ಕೂಡ್ಲೆ
ಮೀಟರ್ ಆಫ್ ಆತಾ? ಸಾರು-ಸಾಂಬಾರೆಲ್ಲಾ ಬೇಕಾಗಿಲ್ಲಾ. ನೀ ಯಾರ? ಎಲ್ಲೆದಿ ಅಂತ ಹೇಳ ಮದ್ಲ.
ಪ್ರಯಾಣಿಕ : ಸಾರ್ ಸ್ವಲ್ಪ ನಿಮ್ಮ ಎಡಗಡೆ ತಿರುಗಿ ನೋಡಿ.
ಹಳ್ಳಿಯ ವ್ಯಕ್ತಿ : ಎಡಕ್ಕ ತಿರಗಬಕ ನಾನ್ಯಾಕ ಎಡಕ್ಕ ತೀರಗಲಿ ? ಯಾಕ? ಬಲಕ್ಕ ತಿರಗಿದ್ರ ಕೇಳ್ಸಲ್ಲನ?
ಪ್ರಯಾಣಿಕ : ಸಾರ್ ನಾನು ಎಲ್ಲಿದ್ದೀನಿ ಅಂತ ನಿಮಗೆ ತೋರಿಸಬೇಕು ಸ್ವಲ್ಪ ಎಡಗಡೆ ತಿರುಗಿ ಸಾರ್. ( ಹಳ್ಳಿಯ ವ್ಯಕ್ತಿ ಎಡಗಡೆ ತಿರುಗಿ, ಪ್ರಯಾಣಿಕನತ್ತ ನೋಡುತ್ತಾನೆ)
ಪ್ರಯಾಣಿಕ : ಏ!! ಗುಗ್ಗು.
ನೀನು ಇದುವರೆಗೂ ಮಾತನಾಡಿದ್ದು ನನ್ನ ಜೊತೆ; ಆ ಫೋನ್ ನಲ್ಲಿ ಅಲ್ಲ. ( ಹಳ್ಳಿಯ ವ್ಯಕ್ತಿ ಆಶ್ಚರ್ಯದಿಂದ ಕಿವಿಯ ಬಳಿ ಇರುವ ತನ್ನ ಫೋನ್ ತೆಗೆದು ನೋಡುತ್ತಾನೆ. ಮುಖ ಸಪ್ಪೆಯಾಗಿತ್ತದೆ.)
ಪ್ರಯಾಣಿಕ : ನಾನು ಇಲ್ಲಿ ಪತ್ರಿಕೆ ಓದುತ್ತಾ ಇದ್ದರೆ ನೀನು ಅಲ್ಲಿ ಫೋನ್ ನಲ್ಲಿ ಮಾತಡ್ತಾ ಇದ್ದೀಯಾ? ಒಂದಕ್ಕೊಂದು ಕ್ಲ್ಯಾಶ್ ಆಗಲ್ವಾ? ಹೋಗೋ ಆ ಕಡೆ.
ಹಳ್ಳಿಯ ವ್ಯಕ್ತಿ : ಆಲಾಲಾಲಾಲಾ ಲಾ... ನಾ ಇಲ್ಲೆ ಪೋನ್ಯಾಗ ಮಾತಾಡ ಮುಂದ ಅಡ್ಡ ಬಾಯಿಹಾಕಿ ತೊಂದರಿ ಮಾಡಿದ್ದು ಅಲ್ದ ; ನನಗ ರೋಪ್ ಹಾಕ್ತೀಯ? ಈ ಬಸ್ ಸ್ಟ್ಯಾಂಡ್ ನಿಂದೊಬ್ಬವುಂದ ಅಲ್ಲಾ. ಬೇಕಂದರ ನೀನ ಎದ್ದ ಹೋಗ ನನಗ ಹೇಳಾಕ ಬಂದಾ.
ಪ್ರಯಾಣಿಕ : ಆಯ್ತು ಸರ್ ನೀವು ಇಲ್ಲೇ.. ಬಾಯಿ ಬಡ್ಕೊಳ್ಳಿ ಅಲ್ಲಾ ಮಾತಾಡ್ಕೊಳ್ಳಿ. ( ಪತ್ರಿಕೆ ಕಣ್ಣ ಮುಂದೆ ಹಿಡಿದುಕೊಳ್ಳುತ್ತಾನೆ. ನಂತರ ಸ್ವಲ್ಪ ಬದಿಗೆ ಸರಿಸಿ ಜನರ ಕಡೆಗೆ ನೋಡುತ್ತಾ..) ಈಗ ನೋಡಿ ; ಇವನಿಗೆ ಹೇಗೆ ಹಲ್ವ ಕೊಡ್ತೀನಿ ಅಂತ.
ಹಳ್ಳಿಯ ವ್ಯಕ್ತಿ : (ಫೋನನ್ನು ಕಿವಿಯ ಬಳಿ ಹಿಡಿದುಕೊಂಡು) ಹಲೋ...
ಪ್ರಯಾಣಿಕ : ಯಾರು?
ಹಳ್ಳಿಯ ವ್ಯಕ್ತಿ : ಆಂ.. ನಿನ್ನ ಮಾವ. ಆಗೋನು.
ಪ್ರಯಾಣಿಕ : ಹೌದಾ ಮಾವ? ಏನ ವಿಷಯ?
ಹಳ್ಳಿಯ ವ್ಯಕ್ತಿ : ನೀ ನನ್ನ ಮಗಳ್ನ ಲವ್ ಮಾಡಾಕತ್ತೀ ಅಂತಾ ಗೊತ್ತಾತು ಅದಕ್ಕ ನಿನ್ನ ಎರಡೂ ಕಾಲ ಮುರುದು ಅಲ್ಲಲ್ಲಾ
ನಿನ್ನ ಎರಡೂ ಕಾಲ ತೊಳದ, ಕನ್ಯಾದಾನ ಮಾಡಬಕಂತ ನಿರ್ಧಾರ ಮಾಡೆನಿ. ಈಗ ನೀ ಎಲ್ಲಿ ಅದೀಪಾ ಅಳಿಯ? ಆಗವನೆ.
ಪ್ರಯಾಣಿಕ : ಮಾವ ನಾನೀಗ ಬಸನಕಟ್ಟಿಯೊಳಗ ಇದ್ದೀನಿ. ನೀವು ನಮ್ಮ ಪ್ರೀತಿ ಒಪ್ಪಿಕೊಂಡಿದ್ದು ನನಗೆ ತುಂಬಾ ಖುಷಿ ಆಗಿದೆ ಮಾವ. ನಂದು ನಿನ್ನ ಮಗಳದು ಮದುವೆ ಯಾವಾಗ ಮಾಡ್ತೀರಿ ಮಾವ?
ಹಳ್ಳಿಯ ವ್ಯಕ್ತಿ : ಮದುವಿನಾ? ಮದ್ಲ ನಿನ್ನ ತಿಥಿ ಮಾಡಬಕ. ಲೇ. ಯಾವನೊ ನೀನು? ನಿನ್ನ ಮದವಿ ಮಾಡಿ, ನಾ ನಿನ್ನ ಮಾವ ಆಗಬಕು; ನೀ ನನ್ನ ಅಳಿಯ ಆಕಿಯ? ಲೇ. ಯಾವನೋ ನೀನು? ಯಾ ಊರೋ ನಿಂದು? ಸರಿಯಾಗಿ ಹೇಳಿದರ ಉಳಕಂತಿ
ಇಲ್ಲಾಂದ್ರ ಹುಡುಕ್ಕೆಂದ್ ಬಂದ್ ಹೊಡಿತೆನಿ. ನನ್ನ ಹುಡುಗಿಗೆ ಪೋನ್ ಮಾಡಿ ತೊಂದ್ರಿ ಕೊಡ್ತೀಯ ? ಎಷ್ಟ ಧೈರ್ಯಲೆ ನಿನಗ?
ಪ್ರಯಾಣಿಕ : ಹಲೋ... ಮಾತು ಜಾಸ್ತಿ ಆಯಿತು. ನಾನು ಯಾರು ಅಂತ ಗೊತ್ತಾದರೆ... ನೀನು ಊರು ಬಿಟ್ಟೇ ಹೋಗ್ತೀಯಾ.
ಹಳ್ಳಿಯ ವ್ಯಕ್ತಿ : ಮದ್ಲ ನೀ ಎಲ್ಲೆ ಅದಿ ಅಂತ ಹೇಳ ಆಮೇಲೆ ಯಾರ ಊರ ಬಿಡತಾರ ಅಂತ ಗೊತ್ತಾಕತಿ.
ಪ್ರಯಾಣಿಕ : ಎಂ.ಎಲ್.ಎ ಯಾರು ಅಂತ ಗೊತ್ತಾ?
ಹಳ್ಳಿಯ ವ್ಯಕ್ತಿ : ಅವರ್ಯಾರ ಅಂತಾ ನನಗ ಗೊತೈತಿ. ಎಂ.ಎಲ್.ಎ ಹೆಸರು ಹೇಳಿಬಿಟ್ರ ಬಿಟ್ ಬಿಡತನಿ ಅಂತ ಮಾಡಿಯ.
ಪ್ರಯಾಣಿಕ : ಬಿಡಲೇಬೇಕು ಯಾಕಂದರೆ... ನಾನವರ ಮಗ.
ಹಳ್ಳಿಯ ವ್ಯಕ್ತಿ : ( ಬೇಸರದಿಂದ ತಲೆಕೆರೆದುಕೊಳ್ಳುತ್ತ ) ಆಂ! ಸಾರಿ ಸಾರ್ ತಪ್ಪಾಯ್ತು ಸಾರ್ ನೀವು ಯಾರಿಗೇ ಪೋನ್ ಮಾಡಾಕ ಹೋಗಿ ನಮ್ಮ ಹುಡುಗಿಗೆ ಬಂದತಿ ಅಂತ ಕಾಣ್ತತಿ. ಅದನ್ನ ಆಕಿ ತಪ್ಪಾಗಿ ತಿಳಕಂದ ನನಗ ಹೇಳಿದ್ಲು; ಅದನ್ನ ಕೇಳಿ ನಾ ನಿಮಗ ರೋಪ್ ಹಾಕಾಕ ಬಂದ್ಯಾ. ತಪ್ಪೆಲ್ಲ ನಮ್ದೆ ; ದಯವಿಟ್ಟು ಕ್ಷಮಿಸಿ ಸಾರ್. ( ಪ್ರಯಾಣಿಕನು ಪತ್ರಿಕೆಯನ್ನು ಸ್ವಲ್ಪ ಬದಿಗೆ ಸರಿಸಿ ಮುಗುಳ್ನಗುತ್ತಾನೆ.)
ಹಳ್ಳಿಯ ವ್ಯಕ್ತಿ : ( ಭಯದಿಂದ ) ಅಯ್ಯಯ್ಯಪ್ಪಾ ಈ ಹುಡಿಗೇರ ಮಾಡೊ ಕೆಲಸ ಒಂದಂದಲ್ಲಾ. ಆಕಿನ ಮಾತ ಕೇಳಿ ನಾ ಹಾಳಾದ್ಯಾ. ( ದೌಡಾಯಿಸಿ ಹೋಗುತ್ತ..) ಅಪ್ಪಾ ಶಿವನೇ..ನೀನೇ ಕಾಪಾಡಪ್ಪಾ.
ಪ್ರಯಾಣಿಕ : ( ಖುಷಿಯಿಂದ ಎದ್ದು ನಿಂತು) ಹೇಗಿದೆ ಹಲ್ವಾ? ನಿಮಗೆ ಯಾರಿಗಾದರೂ ಬೇಕಾ?

No comments:
Post a Comment