ಒತ್ತಡ ಸ್ವಲ್ಪ ಜವಾಬ್ದಾರಿಯನ್ನು ಬೆಡುತ್ತದೆ ಸಮಯದ ಸರಿಯಾದ ಹೊಂದಾಣಿಕೆ ಮಾಡಿಕೊಂಡು ವಿವೇಚನೆಯಿಂದ ಬಳಸಿದರೆ ಎಂಥ ಕಠಿಣ ಕೆಲಸವನ್ನಾದರೂ ಶಾಂತ ಚಿತ್ತತೆಯಿಂದ ಸರಿಯಾದ ಸಮಯಕ್ಕೆ ಮುಗಿಸಬಹುದು.
ಲಾರ್ಡ ಚೆಸ್ಟರೀಲ್ಡ್ ಹೀಗೆ ಉಲ್ಲೇಖಿಸುತ್ತಾರೆ " ನಿಮಿಷಗಳ ಬಗ್ಗೆ ಎಚ್ಚರಿಕೆ ವಹಿಸಿ ಗಂಟೆಗಳು ತನಗೆ ತಾನಾಗಿಯೆ ತಲೆ ಬಾಗುತ್ತವೆ " ಎಂದು .ಇಂದಿನ ದಿನಗಳಲ್ಲಿ ಮನುಷ್ಯ ಸಾಧನೆ ಅಥವಾ ಕೆಲಸದಲ್ಲೀ ಹಿಂದಿಳಿದಿದ್ದಾನೆ ಎಂದರೆ ಅವನು ಕೇವಲ ಸೋಮಾರಿಯಲ್ಲ ಜೊತೆಗೆ ಸಮಯ ನಿರ್ವಹಣೆಯ ಕೊರತೆಯಿಂದ . ಒತ್ತಡದಲ್ಲಿ ಸಿಲುಕಿ ಖಿನ್ನತೆಗೆ ಒಳಗಾಗಿದ್ದಾನೆ ಎಂದು ಅರ್ಥ.ನಮಗೆ ಸಮಯ ವಿಲ್ಲ ಸಮಯ ವಿಲ್ಲ ಎಂದು ಹಪಿ ಹಪಿಸುತ್ತೆವೆ ಆದರೆ ಸಮಯ ಸದ್ದಿಲ್ಲದೆ ಸೋರಿ ಹೋಗುಲು ಕಾರಣವೂ ಕೂಡ ನಾವೆ ಆಗಿದ್ದೆವೆ .ಸಮಯ ಮತ್ತು ಒತ್ತಡ ಒಂದೇ ನಾಣ್ಯದ ಎರಡು ಮುಖಗಳು .ಯಾರನ್ನಾದರೂ ಕೇಳಿ ನೋಡಿ ಇವತ್ತಿನ ಕೆಲಸ ಎಲ್ಲಾ ಮುಗಿತಾ ಅಂತಾ ಅಯ್ಯೋ ಸಮಯವೆ ಇಲ್ಲ ಎಂಬ ಉದ್ಗಾರಾ ಎಷ್ಟು ಸಲಿಸಾಗಿ ಬರುತ್ತದೆ.ಆದರೆ ಈ ಮಣ್ಣಲ್ಲಿ ಹುಟ್ಟಿ ಶತಮಾನಗಳು ಕಳೆಯದರೂ ಮರೆಯಾಗದ ಸಾಧನೆ ಮಾಡಿರುವವರಿಗೂ ಕೂಡ ಒಂದು ದಿನಕ್ಕೆ ಇಪ್ಪತ್ತನಾಲ್ಕು ಗಂಟೆಗಳೆ ಇದ್ದಿದ್ದು.ಉದಾ: ಅಂಬೇಡ್ಕರ್.ಗಾಂಧಿಜಿ ಜ್ಯೋತಿ ಬಾಪುಲೆ ಸುಭಾಷ್ ಚಂದ್ರ ಬೋಸ್.ನ್ಯೂಟನ್ ಹೀಗೇ ಎಳೆಯತ್ತಾ ಹೊದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಸಮಯದ ನಿರ್ವಹಣೆ ನಮ್ಮ ಬದುಕಿನ ಅತಿ ಮುಖ್ಯವಾದ ಅಂಶ.ನಾವು ಯಂತ್ರದಂತಿದ್ದರೆ ಬದುಕು ಯಾಂತ್ರಿಕವಾಗುತ್ತದೆ.ನಾವು ಪಾದರಸದಂತಿದ್ದರೆ ಬೆಟ್ಟಗಳು ಕೂಡ ಕರಗಿ ನಿರಾಗುತ್ತವೆ. ಸಮಯ ಸಮದ್ರದ ಅಲೆಗಳು ಯಾರಿಗೂ ಕಾಯುವುದಿಲ್ಲ ಎಂಬ ಮಾತಿದೆ ನಿಗದಿತ ಸಮಯಕ್ಕೆ ನಾವೇನಾದರೂ ಪ್ಲಾನ್ ಮಾಡಿಕೊಂಡರೆ ಸಮಯವೂ ಸದ್ಬಳಕೆ ಆಗುತ್ತದೆ ಒತ್ತಡವೂ ನಿವಾರಣೆಯಾಗುತ್ತದೆ.ನಾವು ಗಡಿ ಬಿಡಿ ಎಲ್ಲಾ ಕೆಲಸಗಳನ್ನು ಒಟ್ಟಿಗೆ ಮಾಡಲು ಹೋದರೆ ಕಲಸುಮೆಲೋಗರವಾಗುತ್ತದೆ.
ನಾವು ಮಾಡಬೇಕೆಂದ ಕೆಲಸದಲ್ಲಿಯೂ ಗುಣಮಟ್ಟ ಇರುವುದಿಲ್ಲ ಹತಾಶೆ ಅಸಂತೋಷ ಮಡುಗಟ್ಟುತ್ತದೆ . ಅದರ ನೋವಿಗೆ ಉಪ್ಪು ಸವರಿದಂತೆ ರಾತ್ರಿ ನಿದ್ರೆಯೂ ಸರಿಯಾಗಿ ಬರುವುದಿಲ್ಲ ಆದುದರಿಂದ ಸಮಯದ ನಿರ್ವಹಣೆ ಎಂದರೆ ದಿನ ವೊಂದರಲಿ ಅತಿ ಮುಖ್ಯವಾದ ಕೆಲಸಗಳ ಪಟ್ಟಿ ಮಾಡಿಕೊಳ್ಳಿ ಆದ್ಯತೆಯ ಮೇರೆಗೆ ವಿಂಗಡಿಸಿಕೊಳ್ಳಿ ಒಂದೊಂದೇ ಕೆಲಸಕ್ಕೊ ಸಮಯ ಹಂಚಿ ಈಗ ನಿಮ್ಮದೆ ತೀರ್ಮಾನದಂತೆ ಒಂದೊಂದೇ ಕೆಲಸಗಳನ್ನು ಮಾಡುತ್ತಾ ಬನ್ನಿ. ಒಬ್ಬ ವ್ಯಕ್ತಿ ಸಮಯ ನಿರ್ವಹಣೆ ಕಲೆ ಕಲಿತು ಬಿಟ್ಟರೆ ಆತನಿಗೆ ಸಮಯದ ಅಭಾವವೇ ಕಾಡುವುದಿಲ್ಲ.ಅಂತವರು ಮಾತ್ರ ಸಮಯವನ್ನು ಒತ್ತಡಡವಾಗಿ ಪರಿಣಮಿಸದಂತೆ ಅತ್ಯಂತ ಪರಿಣಾಮಕಾರಿಯಾಗಿ ಉತ್ಪಾದನಾಕಾರಿಯಾಗಿ ಬಳಸಿಕೊಂಡು ಮೇಲೆರುತ್ತಾನೆ
ಸಮಯ ಎನ್ನುವುದು ಅತ್ಯಂತ ದೊಡ್ಡ ಆಸ್ತಿ.ಒಮ್ಮೆ ಕಳೆದು ಹೋದ ಸಮಯವನ್ನು ಹಿಂದಕ್ಕೆ ಪಡೆಯಲು ಎಂದಥಾ ಋಷಿ ಮುನಿಗಳಿಗೂ ಕೋಟ್ಯಾಧಿಪತಿಗಳಿಗೂ ಸಾಧ್ಯವಿಲ್ಲ.ಬೆಲೆ ಕಟ್ಟಲಾಗದ ಈ ಆಸ್ಥಿಯ ಒಡೆಯರೆ ನೀವು ಸಾಧ್ಯವಾದಷ್ಟು ಸಮಯವನ್ನು ಸದ್ಬಳಕೆ ಮಾಡಿಕೊಂಡು ಒತ್ತಡದಿಂದ ಹೊರಬಂದು ಮುಕ್ತರಾಗಿ.
ನಮ್ಮ ಕೆಲಸದ ಗುಣಮಟ್ಟ ಮತ್ತು ಪ್ರಮಾಣವನ್ನು ಎರಡು ಅಂಶಗಳು ನಿರ್ಧರಿಸುತ್ತವೆ ; ಮೊದಲನೆಯದು ಆ ಕೆಲಸಕ್ಕಾಗಿ ನಾವು ಮೀಸಲಿಟ್ಟ ಸಮಯ ಮತ್ತು ಅದಕ್ಕಾಗಿ ನಾವು ಪಟ್ಟ ಪರಿಶ್ರಮ ಈ ಎರಡೂ ವಿಷಯಗಳಲ್ಲಿ ಯಾವೂದು ತಪ್ಪಿದರೂ ಕೆಲಸಕ್ಕೆ ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ.
ಸ್ವಾಮಿ ವಿವೇಕಾನಂದರು ಹೀಗೆ ಅಭಿಪ್ರಾಯ ಪಡುತ್ತಾರೆ ಶಕ್ತಿಶಾಲಿ ಶರೀರ ಹೊಂದಿರುವುದಕ್ಕಿಂತ ಸದೃಢ ಮನಸ್ಸುನ್ನು ಹೊಂದಿರಬೇಕು ಏಕೆಂದರೆ ದೃಡ ಮನಸ್ಸಿಲ್ಲದ ಯೋಚನೆಗಳು ಯಾವುದುಕ್ಕೂ ಉಪಯೋಗ ಇಲ್ಲ .ಆದರೆ ದುರ್ಬಲ ಮನಸ್ಸುಲ್ಲೊ ಸ್ವಸ್ಥ ಮತ್ತು ಸದೃಡ ಮನಸ್ಸಿದ್ದರೆ ಅವನೂ ಕೂಡ ಯಶಸ್ವಿಯಾಗಿ ಒತ್ತಡವನ್ನು ದಾಟಿದವನು ಮಾನಸಿಕವಾಗಿ ದೈಹಿಕವಾಗಿ ಭಾವನಾತ್ಮಕವಾಗಿ ಆರೋಗ್ಯವಂತನಾಗಿರುತ್ತಾನೆ.ಎಂದು ಸಂಶೋಧನೆಗಳು ದೃಢಪಡಿಸಿವೆ.ಪ್ರತಿಕೂಲ ಪರಿಸ್ಥಿತಿಗಳು ವಜ್ರಕ್ಕೆ ಹಿಡಿದ ಸಾಣೆಯಂತೆ .ಜವಾಬ್ದಾರಿಯುತವಾಗಿ ನಿರ್ವಹಿಸಿದರೆ ವಜ್ರದ ಹೊಳಪು ತೂಕ ಎರಡೂ ಬರುತ್ತದೆ.ಇಲ್ಲದಿದ್ದರೆ ಇತ್ತೀಚಿನ ದಿನಗಳಲ್ಲಿ ಒತ್ತಡ ಮಾನಸಿಕ ರೋಗವಾಗಿ ಅತಿ ದೊಡ್ಡ ಶತ್ರುವಾಗಿದೆ ನಮ್ಮೇಲ್ಲರ ಆರೋಗ್ಯ ಮತ್ತು ಆನಾರೋಗ್ಯ ಸಮಸ್ಯೆಗಳಿಗೆ ಒತ್ತಡವೆ ಕಾರಣವಾಗಿದೆ.
ನಿಮಗೆ ತುಂಬಾ ಒತ್ತಡ ಎನಿಸಿದಾಗ ಒಂದು ಸಣ್ಣ ವಾಯುವಿಹಾರ ಮಾಡಿ.ಸ್ವಲ್ಪ .ಹೊತ್ತು ಗಾಢವಾಗಿ ನಿದ್ರೆ ಮಾಡಿ.ಭಾವನೆಗಳನ್ನು ಹಿಡಿದಿಡದೆ ಮುಕ್ತವಾಗಿ ವ್ಯಕ್ತ ಪಡಿಸಿ.ಯಾವಾಗಲೂ ತಿಳಿಹಾಸ್ಯ ಮತ್ತು ನಗುಮೊಗದಿಂದ ಇರಿ.ಹವ್ಯಾಸಗಳನ್ನು ರೊಢಿಸಿಕೊಳ್ಳಿ. ಆಗಾಗ ಸಂಗೀತ ಕೇಳುತ್ತಿರಿ .ಸಮಮನಸ್ಕರ ಮತ್ತು ಸಮ ವಯಸ್ಕರ ಜೊತೆಗೆ ಬೆರೆಯುತ್ತಿರಿ ಒತ್ತಡ ನಿರ್ವಹಣೆ ಒಂದು ರೀತಿಯ ಸವಾಲೆ ಸರಿ .ಹೃದಯ ಪರಿಸರ ಮತ್ತು ಮನಸ್ಸಿನ ಪರಿಸರದಲ್ಲಿ ಒತ್ತಡವನ್ನು ಯಶಸ್ವಿಯಾಗಿ ನಿರ್ವಹಿಸಿದರೆ ಶಾಂತಿಯುತ ಮತ್ತು ಸೌಹಾರ್ದತೆಯ ಸೌಂದರ್ಯದ ಸೊಬಗು ಅನುಭವಿಸಬಹುದು.
ಇಲ್ಲಿ ನಿಮಗೊಂದು ಸಲಹೆ ಬಹಳ ಕೆಲಸಗಳನ್ನು ಮೈ ಮೇಲೆ ಎಳೆದುಕೊಳ್ಳ ಬೇಡಿ ಇದಕ್ಕೆ ಪರಿಹಾರ ಇಲ್ಲ.ಎಲ್ಲವನ್ನೂ ಆದ್ಯತೆಯ ಮೇರೆಗೆ ಪಟ್ಟಿ ಮಾಡಿ ನಮಗೆ ದೇವರು ಕೊಟ್ಟಿರುವುದು ಎರಡೇ ಕೈ.ಎರಡು ಕಾಲು ಒಂದೇ ಮೆದುಳು ಅಂದ ಮೇಲೆ ಅತಿಮಾನುಷರಂತೆ ಯಾಕೆ ಆಡಬೇಕು. ಬೇಡ ಒಂದು ಸಮಯಕ್ಕೆ ಒಂದೇ ನಿರ್ದಿಷ್ಟವಾದ ಕೆಲಸ ಮಾಡುತ್ತ ಹೋಗಿ ಇದನ್ನೇ ಕ್ವಾಲಿಟಿ ಟೈಮ್ ಎನ್ನುವುದು.ಒಂದೊಂದೇ ಕೆಲಸಗಳಿಗೆ ನಿಮ್ಮ ಅಮೂಲ್ಯ ಸಮಯ ಹಂಚುತ್ತ ಬಂದ ಹಾಗೆ ಕೆಲಸವೂ ಮುಗಿದು ನೂರಕ್ಕೆ ನೂರರಷ್ಟು ಫಲಿತಾಂಶ ಬಂದರೆ ಅದೆ ನಿಮ್ಮ ಸಾಮರ್ಥ್ಯ.ಆಗ ಗೊಂದಲಗಳಿರುವುದಿಲ್ಲ ಮನಸ್ಸು ಸಿಡಿಮಿಡಿ ಗೊಳ್ಳುವುದಿಲ್ಲ ಚಂಚಲವೂ ಆಗವುದಿಲ್ಲ.ದಿನದ ಕೆಲಸಗಳು ಸಾಂಗವಾಗಿ ಸಾಗಿದರೆ ತಿಂಗಳು ವರ್ಷಗಳು ತನ್ನಷ್ಷಕ್ಕೆ ತಾನೆ ಮೈದುಂಬಿ ನಿಲ್ಲುತ್ತವೆ.
ಒಂದು ವೇಳೆ ಅವತ್ತಿನ ಕೆಲಸ ಆಗಲಿಲ್ಲ ಎಂದಿಟ್ಟುಕೊಳ್ಳಿ
ಆಕಾಶ ತಲೆಯ ಮೇಲೆನೂ ಬೀಳುವುದಿಲ್ಲ ಮತ್ತೊಂದು ಸುಂದರ ನಾಳೆ ನಿಮಗಾಗಿ ಕಾದಿರುತ್ತದೆ.

-ಶಾಂತಅತ್ನಿ ಹಾಸನ
No comments:
Post a Comment