ಹೊಸತರ ಹುಡುಕಟದಲ್ಲಿ ಯುವ ಮನಸ್ಸುಗಳ ಸಂಚಾರ.... ನಿಮ್ಮ ಬರಹಗಳನ್ನು ಇಲ್ಲಿಗೆ ಕಳಿಸಿ.. mathinakatte@yahoo.com

ಒತ್ತಡ ಒಂದು ಜವಾಬ್ದಾರಿ

ಒತ್ತಡ ಸ್ವಲ್ಪ ಜವಾಬ್ದಾರಿಯನ್ನು ಬೆಡುತ್ತದೆ ಸಮಯದ ಸರಿಯಾದ ಹೊಂದಾಣಿಕೆ ಮಾಡಿಕೊಂಡು ವಿವೇಚನೆಯಿಂದ ಬಳಸಿದರೆ ಎಂಥ ಕಠಿಣ ಕೆಲಸವನ್ನಾದರೂ ಶಾಂತ ಚಿತ್ತತೆಯಿಂದ ಸರಿಯಾದ ಸಮಯಕ್ಕೆ ಮುಗಿಸಬಹುದು.
ಲಾರ್ಡ ಚೆಸ್ಟರೀಲ್ಡ್ ಹೀಗೆ ಉಲ್ಲೇಖಿಸುತ್ತಾರೆ " ನಿಮಿಷಗಳ ಬಗ್ಗೆ ಎಚ್ಚರಿಕೆ ವಹಿಸಿ ಗಂಟೆಗಳು ತನಗೆ ತಾನಾಗಿಯೆ ತಲೆ ಬಾಗುತ್ತವೆ " ಎಂದು .ಇಂದಿನ ದಿನಗಳಲ್ಲಿ ಮನುಷ್ಯ ಸಾಧನೆ ಅಥವಾ ಕೆಲಸದಲ್ಲೀ ಹಿಂದಿಳಿದಿದ್ದಾನೆ ಎಂದರೆ ಅವನು ಕೇವಲ ಸೋಮಾರಿಯಲ್ಲ ಜೊತೆಗೆ ಸಮಯ ನಿರ್ವಹಣೆಯ ಕೊರತೆಯಿಂದ . ಒತ್ತಡದಲ್ಲಿ ಸಿಲುಕಿ ಖಿನ್ನತೆಗೆ ಒಳಗಾಗಿದ್ದಾನೆ ಎಂದು ಅರ್ಥ.ನಮಗೆ ಸಮಯ ವಿಲ್ಲ ಸಮಯ ವಿಲ್ಲ ಎಂದು ಹಪಿ ಹಪಿಸುತ್ತೆವೆ ಆದರೆ ಸಮಯ ಸದ್ದಿಲ್ಲದೆ ಸೋರಿ ಹೋಗುಲು ಕಾರಣವೂ ಕೂಡ ನಾವೆ ಆಗಿದ್ದೆವೆ .ಸಮಯ ಮತ್ತು ಒತ್ತಡ ಒಂದೇ ನಾಣ್ಯದ ಎರಡು ಮುಖಗಳು .ಯಾರನ್ನಾದರೂ ಕೇಳಿ ನೋಡಿ ಇವತ್ತಿನ ಕೆಲಸ ಎಲ್ಲಾ ಮುಗಿತಾ ಅಂತಾ ಅಯ್ಯೋ ಸಮಯವೆ ಇಲ್ಲ ಎಂಬ ಉದ್ಗಾರಾ ಎಷ್ಟು ಸಲಿಸಾಗಿ ಬರುತ್ತದೆ.ಆದರೆ ಈ ಮಣ್ಣಲ್ಲಿ ಹುಟ್ಟಿ ಶತಮಾನಗಳು ಕಳೆಯದರೂ ಮರೆಯಾಗದ ಸಾಧನೆ ಮಾಡಿರುವವರಿಗೂ ಕೂಡ ಒಂದು ದಿನಕ್ಕೆ ಇಪ್ಪತ್ತನಾಲ್ಕು ಗಂಟೆಗಳೆ ಇದ್ದಿದ್ದು.ಉದಾ: ಅಂಬೇಡ್ಕರ್.ಗಾಂಧಿಜಿ ಜ್ಯೋತಿ ಬಾಪುಲೆ ಸುಭಾಷ್ ಚಂದ್ರ ಬೋಸ್.ನ್ಯೂಟನ್  ಹೀಗೇ ಎಳೆಯತ್ತಾ ಹೊದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಅಂತಃಪತನ

- ಅರ್ಚನಾ. ಹೆಚ್

ಬೆಳಗಿನ ಕೊರೆವ ಚಳಿಯಲ್ಲಿ‌ ಬಾಲ್ಕಾನಿಯ ತೂಗುಯ್ಯಾಲೆ ಜೀಕುತ್ತಾ ಬಿಸಿ ಬಿಸಿ ಟೀ ಹೀರೋದೇ ಒಂದು ತೆರನಾದ ಬೆಚ್ಚನೆಯ ಅನುಭೂತಿ..ಯೋಗ ಮಾಡಿ ದಣಿವಾದ ದೇಹಕ್ಕೆ  ಎರಡು ಓಟ್ಸ್ ಬಿಸ್ಕೆಟ್ ಒಂದು ಕಪ್  ಚಹಾ ನರನಾಡಿಯೆಲ್ಲಾ ಪುನಶ್ಚೇತನ...!..ಆರನೇ ಮಹಡಿಯ ಬಾಲ್ಕನಿಯ  ತೂಗುಯ್ಯಾಲೆಯಲ್ಲಿ ಚಹಾ ಸ್ವಾದಿಸುತ್ತಿದ್ದ  ಶುಭಾಳ ದೃಷ್ಟಿ ಹಿಂಬದಿಯ ರಸ್ತೆಯ ಖಾಲಿ ಸೈಟುಗಳಲ್ಲಿ ಗುಡಿಸಲು ಕಟ್ಟಿಕೊಂಡಿದ್ದ ಹಕ್ಕಿಪಿಕ್ಕಿಯ ಜನಾಂಗದವರತ್ತ ಹರಿಯಿತು..ಕೊಂಕಳಲ್ಲಿ ಎರಡು ಮಕ್ಕಳು ಹೊತ್ತ ಕರ್ರನೆಯ ಸಣಕಲು ದೇಹದ ಸ್ತ್ರೀ, ಆಗ ತಾನೇ  ಹಿಂದಿನ ಖಾಲಿ ಸೈಟ್ನ ಪೊದೆಯಲ್ಲಿ ಬಹಿರ್ದೆಶೆ ಮುಗಿಸಿಬಂದ ಇನ್ನೊಂದು ಮಗುವನ್ನೂ  ಅಲ್ಲೇ ಇದ್ದ ಚಪ್ಪಡಿ ಕಲ್ಲ ಮೇಲೆ ಕೂರಿಸಿ ಒಂದಕ್ಕೆ ಅಂಡು ತೊಳೆದು ಉಳಿದವೆಲ್ಲದರ ವಸ್ತ್ರ ಕಳಚಿ  ಬಿಂದಿಗೆಯಿಂದ ಬೆಳ್ಳನೆಯ ಬಕ್ಕೆಟ್ಟಿಗೆ ನೀರು ತುಂಬಿಸಿ  ಬೆತ್ತಲಿದ್ದ ಮಕ್ಕಳ ಮೇಲೆ ನೀರು ಹುಯ್ದಳು...ಬಹುಶಃ ನೀರು ತಣ್ಣಗಿತ್ತೇನೋ!?? ನಾಲ್ಕೈದು ಚೊಂಬು ನೀರು ಹಾಕಿದ ಮೇಲೆ ಚಳಿಯಲ್ಲಿ ನಡುಗುತ್ತಿದ್ದ ಮಕ್ಕಳನ್ನು ಬಟ್ಟೆಕೊಡವುವಂತೆ ಗಾಳಿಗೆ ಸುಯ್ಯನೆ ಕೊಡವಿ ಗುಡಿಸಲಿಗೆ  ಕರೆದೊಯ್ದಳು..ಎರಡ್ಮೂರು ನಿಮಿಷದ ಬಳಿಕ ಆಕೆಯ ಗಂಡ ಮೂವರನ್ನೂ ಗುಡಿಸಲ ವಾರಾಂಡದಲ್ಲಿ ಆಟವಾಡಿಸುತ್ತಾ ಕೇಕೆ ಹಾಕಿ ನಗಿಸುತ್ತಿದ್ದದ್ದು  ಶುಭಾಳ ಕಿವಿಗೂ ಕಡಲಲೆಯಂತೆ ಅಪ್ಪಳಿಸಿ, ಮನಸ್ಯಾಕೋ ಭಾರವಾಗಿ ನೆನಪ ನೀರವತೆ ಅವಳನ್ನು  ಕಿವುಡಾಗಿಸಿತು...

ಕಲಾಂ- ನಿಮಗೊಂದು ಸಲಾಂ

          ನಾನು ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದೆ, ಇಂಗ್ಲೀಷ್‌ ಪಠ್ಯಕ್ಕೆ ಕಲಾಂರವರ “wings of fire” ಕೃತಿಯಿಂದ ಅವರ ಬಾಲ್ಯದ ದಿನಗಳ ಭಾಗವನ್ನು ಪಾಠವಾಗಿ ಸೇರಿಸಿದ್ದರು, ರಮಣಿ ಸರ್‌ ಇಂಗ್ಲೀಷ್‌ ಮೇಸ್ತರು ತಮಿಳುನಾಡಿನವರೇ
ಆಗಿದ್ದರಿಂದಲೇನೋ ಆ ಪಾಠ ದೇಶೀಶೈಲಿಯಲ್ಲಿ ಕಿವಿಗೆಬಿದ್ದು ಮನಮುಟ್ಟಿ ಕಲಾಂ ಸರ್‌ಬದುಕಿನ ಆದರ್ಶ ನಾಯಕರಾಗಿದ್ದರು.
ಹತ್ತನೇ ತರಗತಿಗೆ ಹೋಗುವ ಮುನ್ನ ಬೇಸಿಗೆ ರಜೆ, ಬೆಂಗಳೂರಿನ ಅವಿನ್ಯೂ ರಸ್ತೆ ಬದಿಯ ವ್ಯಾಪಾರಿ ಅಂಗಡಿಯಲ್ಲಿದ್ದ “wings of fire” ಪುಸ್ತಕ ಕಣ್ಣುಕುಕ್ಕಲು ಕಾಲು ಅಲ್ಲೇ ನಿಂತಿತು, ಪಠ್ಯದಲ್ಲಿದ್ದ ಪುಸ್ತಕದ ತುಣುಕೇ ಅಷ್ಟು ಮನಮುಟ್ಟಿತ್ತು ಸಂಪೂರ್ಣ ಪುಸ್ತಕವ ಓದುವ ಆಸೆ, ಮಗಳ ಆಸೆ ಅರಿತು ಅಪ್ಪಾಜಿ ಪುಸ್ತಕ ಕೊಡಿಸಿದ್ದರು, “wings of fire” ಪುಸ್ತಕದ ಒಡತಿ ನಾನೆಂದು ಗೆಳತಿಯರ ಮುಂದೆ ಬೀಗಬೇಕಿತ್ತು, ಹೊಸ ಪುಸ್ತಕವ ಹಾಗೇ ಜೋಪಾನ ಮಾಡಿದ್ದೆ, ಶಾಲೆ ಪ್ರಾರಂಭವಾಗಲು ಎಲ್ಲರಿಗೂ ತೋರಿಸಿದ್ದೆ, ಹುಡುಗುಬುದ್ದಿ, ಅದ್ಯಾರೋ ಗೆಳತಿ ಓದಿ ಹಿಂತಿರುಗಿಸುವೆ ಎನ್ನಲು ನಾನು ಓದುವ ಮುನ್ನವೇ ಅವಳ ಕೈಗೆ ಕೊಟ್ಟೆ, ಕೈಯಿಂದ ಕೈಗೆ ಹರಿದಾಡಿದ ಪುಸ್ತಕ ಯಾರ ಕೈಯಿಂದ ಕೈಜಾರಿತೋ, ಮಾಯವಾಯಿತು.
ಪುಸ್ತಕ ಕೊಂಡು ಗೆಳತಿಯರ ಮುಂದೆ ಬೀಗಿದ್ದಷ್ಟೇ ಲಾಭ ಪುಸ್ತಕದ ಒಳಹೊಕ್ಕು ನೋಡಲಾಗಲಿಲ್ಲ, ಪುಸ್ತಕ ಇನ್ನು ನೆನಪಷ್ಟೇ.