ಸಾಹಿತ್ಯ ಎಂಬ ಮೂರಕ್ಷರ ನಮ್ಮ ಮನದ ಭಾವನೆಗಳನ್ನು ಲೇಖನದ ರೂಪದಲ್ಲಿ ಹೊರಹಾಕುವ,ಮತ್ತು ಬೇರೆಯವರ ಭಾವನೆಗಳನ್ನು ಹಂಚಿಕೊಳ್ಳಲು ಒಂದು ಅದ್ಭುತ ವೇದಿಕೆ.ಎಷ್ಟೋ ಮನಸ್ಸುಗಳ ಸಂತೋಷ, ನೋವುಗಳು ಇಲ್ಲಿ ಅನಾವರಣಗೊಳ್ಳುತ್ತವೆ.ಮಹಾನ್ ಕವಿಗಳು ನಮ್ಮ ನಾಡಿಗೆ ಅವರದೇ ಆದ ಕೊಡುಗೆ ನೀಡಿ,ಕನ್ನಡದ ಬಗೆಗಿನ ಅಪಾರ ಪ್ರೀತಿಯನ್ನು ತಮ್ಮ ಕೃತಿಗಳ ಮೂಲಕ ನಾಡಿಗೆ ಪರಿಚಯಿಸಿದ್ದಾರೆ.ಮಹಾನ್ ಕೃತಿಗಳನ್ನು ಕೊಡುಗೆಯಿತ್ತಿದ್ದಾರೆ.ಇಂದಿನ ಪೀಳಿಗೆಯ ಗಮನ ಸೆಳೆಯುವಲ್ಲಿ,ಪಠ್ಯ ಪುಸ್ತಕಗಳಲ್ಲಿ ವಿದ್ಯಾರ್ಥಿಗಳಿಗೆ ಚಿರಪರಿಚಿತವಾಗಿ ಇನ್ನೂ ಜೀವಂತವಾಗಿ ಉಳಿದಿದ್ದಾರೆ.ಅವರ ವಿಚಾರಧಾರೆಗಳು,ವಸ್ತುನಿಷ್ಠ ಮೌಲ್ಯಗಳು,ಸಾಮಾಜಿಕ ರಾಜಕೀಯ,ಜಾನಪದ ಹೀಗೆ ಹತ್ತು ಹಲವು ರಂಗಗಳಲ್ಲಿ ಸಾಹಿತ್ಯದ ಪ್ರಕಾರಗಳ ಛಾಪು ಮೂಡಿಸಿದ್ದಾರೆ.
ಆದರೆ ಇಂದಿನ ಸಾಹಿತ್ಯದ ನೆಡೆ ಯಾವ ಕಡೆ? ಎಂಬ ಗೊಂದಲ ದಿನೆದಿನೇ ಹೆಚ್ಚಾಗತೊಡಗಿದೆ.ಒಬ್ಬ ವ್ಯಕ್ತಿಯ ವರ್ಚಸ್ಸು ,ಢಾಂಬಿಕತೆ ಮತ್ತು ಹಣದ ಆಧಾರ ಮೇಲೆ ಅಳೆಯಲಾಗುತ್ತಿದೆ,ಎಂತಹಾ ವಿಪರ್ಯಾಸ!.
ಸಾಧನೆ ಒಂದು ತಪಸ್ಸು,ಸಾಧನೆಯ ಉತ್ತುಂಗ ಬಹು ಎತ್ತರ,ಕಲಿಯುವುದು ಸಾಗರದಂತಿದೆ.ಕಲಿಯುವ ಮುನ್ನವೇ ಸಾಧನೆಯು ಶೂನ್ಯವಾದರೆ ಸಾಲು ಸಾಲು ಪ್ರಶಸ್ತಿಯನ್ನು ಬೆನ್ನಟ್ಟಿ ಹೊರಟರೇ ಸಾಹಿತ್ಯದ ಅದೋಗತಿ ಖಂಡಿತಾ ಪ್ರಶಸ್ತಿಗಳ ಮಾರಟ ಹೆಚ್ಚಾಗುತ್ತಿದೆ.
ಪ್ರಶಸ್ತಿಗಳು ತಮ್ಮ ಮೌಲ್ಯ ಕಳೆದುಕೊಳ್ಳುತ್ತಿವೆ.ವ್ಯಾಪಾರದ ಶಕ್ತಿ ಕೇಂದ್ರಗಳಾಗಿ ಮಾರ್ಪಡುತ್ತಿವೆ.ಒಬ್ಬ ವ್ಯಕ್ತಿಯ ಸಾಧನೆಯ ಗುರುತಿಸಬೇಕೆ ಹೊರತು ಅವನ ಹಣದ ಹಿನ್ನೆಲೆಯನ್ನಲ್ಲ.ಅದರ ಆಧಾರದ ಮೇಲೆ ಪ್ರಶಸ್ತಿಯನ್ನು ನೀಡುವುದು ಎಷ್ಟರ ಮಟ್ಟಿಗೆ ಸರಿ.ಒಬ್ಬ ವ್ಯಕ್ತಿಯ ಸಾಧನೆಯನ್ನು ಗುರುತಿಸಿ, ಅವನ ಮಾನವೀಯ ಮೌಲ್ಯಗಳನ್ನು, ಆತನು ಸಾಮಾಜಕ್ಕೆ ನೀಡಿದ ಕೊಡುಗೆಯನ್ನು ಮತ್ತು ಮಾದರಿ ವ್ಯಕ್ತಿತ್ವವನ್ನು ಗಮನಿಸಿ ಪ್ರಶಸ್ತಿಗಳ ನೀಡಿ ಗೌರವಿಸಿದಾಗ ಅದಕ್ಕೊಂದು ಅರ್ಥ ಸಿಗುತ್ತದೆ.
ಆದರೆ ಇಂದು ಒಂದೆರಡು ಪುಸ್ತಕಗಳು ಹೊರತಂದರೆ ಒಂದೆರಡು ಕವಿಗೊಷ್ಟಿಯಲ್ಲಿ ಭಾಗವಹಿಸಿದರೆ ಅವನ ಸಾಧನೆ ಅಪಾರ.ಪ್ರಮಾಣಿಕವಾದ ಕವಿಮನಸುಗಳಿಗೆ ಆದ್ಯತೆ ಕನಸಿನ ಮಾತು.ಸಾಹಿತ್ಯ ರತ್ನ, ಕನ್ನಡ ರತ್ನ,ಕುವೆಂಪು ರತ್ನ, ಕನ್ನಡದ ಕಣ್ಮಣಿ ಹೀಗೆ ಹಲವಾರು ಪ್ರಶಸ್ತಿಯನ್ನು ಹುಟ್ಟು ಹಾಕಿ ಮಹಾನ್ ಚೇತನಗಳ ಕಲಾ ತಪಸ್ವಿಗಳ ಹೆಸರಲ್ಲಿ ನೀಡುವುದಾದರೆ,ಅದನ್ನು ತೆಗೆದುಕೊಳ್ಳುವ ವ್ಯಕ್ತಿಯ ಸಾಧನೆ ಎಷ್ಟಿರಬೇಕು ಎಂಬ ಸಣ್ಣ ಪರಿಜ್ಞಾನವು ಇಲ್ಲದಂತಾಗಿದೆ.
ಹಲವಾರು ಸಂಘಸಂಸ್ಥೆಗಳು ದಿನಕ್ಕೊಂದು, ವಾರಕ್ಕೊಂದು ಎಂಬಂತೆ ಗಲ್ಲಿಗಲ್ಲಿಗೊಂದು ಹುಟ್ಟುತ್ತಾ ಯುವ ಕವಿಗಳ ದಾರಿತಪ್ಪಿಸುತ್ತಿವೆ.ಅವರ ಕವನಗಳ ತಪ್ಪುಒಪ್ಪುಗಳ ಅವರ ಗಮನಕ್ಕೆ ತರದೇ ಸಂಪೂರ್ಣವಾಗಿ ಅವಲೋಕಿಸದೇ ತುಂಬಾ ಚೆನ್ನಾಗಿದೆ ಎಂದು ಹೇಳಿದರಾಯಿತು.ಮತ್ತೆ ಕೆಲವು ಕವಿಗಳ ಕವನವನ್ನು ಕಡೆಗಣಿಸಿದಾಗ ಅವರ ಉತ್ಸಾಹಕ್ಕೆ ತಣ್ಣಿರೆರಚುವುದೇ ಹೆಚ್ಚು.
ಕವಿತೆ ಆಳ, ಭಾವ ,ಸ್ವಾಭಾವಗಳನ್ನು ಗಮನಿಸಿ ಅವರ ತಪ್ಪುಒಪ್ಪಗಳ ಅವರ ಗಮನಕ್ಕೆ ತರದೇ ಅವರ ಭಾವದ ಪರಿವಿಲ್ಲದೇ ಅವರಿಗೊಂದು ಪ್ರಶಸ್ತಿ ಇತ್ತರೆ ಅವರ ತಪ್ಪಿನ ಅರಿವಾಗುವ ಬದಲು ಹಣದ ಜೊತೆ ಮನಸ್ಸಿಗೆ ತೋಚಿದ್ದನ್ನು ಗೀಚುತ್ತಾ ಹೋದರೆ ಸಮಾಜಕ್ಕೆ ಇವರ ಕೊಡುಗೆಯೇನು?.
ಆಡಂಬರದ ವೇದಿಕೆಯ ಮೇಲೆ ಆಡಂಬರದ ವ್ಯಕ್ತಿಗಳ ಆಹ್ವಾನವಿತ್ತು ಸಾಹಿತ್ಯದ ಗಂಧವೂ ಗೊತ್ತಿಲದ ಪ್ರಭಾವಿ ನಾಯಕರನ್ನು ಕರೆತಂದು ವೇದಿಕೆಯ ಮುಂಭಾಗ ಕುಳಿತ ಕವಿಮನಸುಗಳಿಗೆ ಯಾವ ಮಾಹಿತಿಯು ದೊರೆಯದೆ,ಅವರ ಭಾವನೆಗಳನ್ನು ಹಂಚಿಕೊಳ್ಳಲು ಅವಕಾಶ ದೊರೆಯದಂತೆ ಮಾಡಿ ಕಾರ್ಯಕ್ರಮ ಮಾಡಿದರೆ ಸಾಹಿತ್ಯದ ಹೆಸರಲ್ಲಿ ಸಾಹಿತ್ಯಕ್ಕೆ ಅವಮಾನವೇ ಸರಿ.
ಕವಿಗೊಷ್ಟಿ ಗೆ ಬಂದ ಕವಿಗಳಿಗೆ ಅಭಿನಂದನಾ ಪತ್ರ ಕಿರುಕಾಣಿಕೆ ನೀಡಿ ಕಳುಹಿಸಿದರೆ ಮುಗಿಯಿತು.ಇನ್ನೂ ವೇದಿಕೆಯ ಮೇಲಿರುವ ಅತಿಥಿಗಳಿಗೆ ಪ್ರಶಸ್ತಿ ಪತ್ರ,ಹಾರ ತುರಾಯಿಗಳ ಜೊತೆ ಶಾಲನ್ನು ಹೊದಿಸಿ ನೆನಪಿನ ಕಾಣಿಕೆ ನೀಡಿ ಅವರೊಂದಿಗೆ ಪೋಟೋ ಕ್ಲಿಕ್ಕಿಸಿದರೆ ಮಹಾನ್ ಸಾಧನೆ ಮಾಡಿದಂತಾಯ್ತು.
ಸಂಘಟನೆಯ ಹೆಸರಲ್ಲಿ ಹಣದೋಚುವ ವಂಚಕರು ಕೂಡಾ ಹುಟ್ಟುತ್ತಲೇ ಇದ್ದಾರೆ.ನಮ್ಮ ಸಾಹಿತ್ಯ ಕ್ಷೇತ್ರ ಎಂತಹಾ ದುಸ್ಥಿತಿಗೆ ಬಂದು ತಲುಪಿದೆ.
ಪದಾಧಿಕಾರಿಗಳು, ಸಂಘಟಕರು ಇತರೆ ಸದಸ್ಯರು ಸಾಹಿತ್ಯದ ಸಾರ್ಥಕತೆಯ ಪಡೆಯುವಲ್ಲಿ ವಿಫಲರಾಗುವ ಬದಲು ಸಾರ್ಥಕತೆ ಪಡೆದರೆ ಉತ್ತಮ. ಪ್ರಶಸ್ತಿಗಳನ್ನು ಮಾರಾಟಕ್ಕಿಟ್ಟು ಅವುಗಳ ಮೌಲ್ಯವನ್ನು ಕಳೆಯದಿರಿ ಎಂಬ ಕೋರಿಕೆ ಕೆಲ ಕವಿಮನಗಳಲ್ಲಿ ಇತ್ತಿಚಿಗೆ ಕೇಳಿಬರುತ್ತಿದೆ.
ಒಂದು ಪ್ರಶಸ್ತಿಯನ್ನು ನೀಡಬೇಕಾದರೆ ಕೆಲವು ನಿಯಮಗಳನ್ನು ಅಳವಡಿಸಿ ಆ ಪರಿಧಿಯೊಳು ಬರುವಂತ ಕವಿಮನಸುಗಳಿಗೆ ನೀಡಿ ಗೌರವಿಸಿ,ಹಿರಿಯ ಸಾಹಿತಿಗಳ ಹೆಸರಲ್ಲಿ ಅವರ ಗೌರವಕ್ಕೆ ಧಕ್ಕೆ ಬರುವಂತ ಕೆಲಸ ಮೊದಲು ನಿಲ್ಲಬೇಕು.ಮುಂದೊಂದು ದಿನ ಪ್ರಶಸ್ತಿಗಳ ಮಾರಟ ಕೇಂದ್ರ ಉದ್ಭವಿಸಿದರೂ ಆಶ್ಚರ್ಯ ಪಡುವ ಅಗತ್ಯವಿಲ್ಲ.ಯಾವುದೇ ವಿಷಾದದಿಂದಾಗಲೀ ಅಥವಾ ನೊಂದು ನುಡಿದಿಲ್ಲ,ಮಾನವೀಯ ಮೌಲ್ಯಗಳ ಕುಸಿತ ದಿನೆ ದಿನೇ ಹೆಚ್ಚುತ್ತಾ ಹೋಗುತ್ತದೆ ಎಂಬ ಕಾಳಜಿ.ಎಲ್ಲರೂ ಇಂತಹ ಸಂಘಸಂಸ್ಥೆಗಳ ವಿರುದ್ಧ ಧ್ವನಿ ಎತ್ತೊಣಾ ಎಂದು ಕಳಕಳಿಯ ಪ್ರಾರ್ಥನೆ.
- ಭಾಗ್ಯಲಕ್ಷ್ಮೀ ನಾಗಮೂರ್ತಿ ದಾನಿಹಳ್ಳಿ.
No comments:
Post a Comment