ಮನದಾಳದ ಮೌನದಲಿ ಅಡಗಿಹುದುನೂರೆಂಟು ಬಣ್ಣಗಳ ಭಾವನೆಗಳ ಗುಟ್ಟು
ಬೆಳಕಲಿ ಕಾಮನ ಬಣ್ಣಗಳು ಬೆರೆತಂತೆ
ಮನದಲಿ ಎಳೆ ಎಳೆಯಾಗಿ ಬಿಡಿಸಿ
ರಂಗು ರಂಗಿನ ಜನಗಳಲಿ ಮೇಳಯಿಸಿಹುದು
ಬಹು ಬಗೆಯ ಬಣ್ಣಗಳ ರೀತಿ ನೀತಿಗಳು
ತಿಳಿ ನೀರ ತಳದಲಿ ಬೂದುಮಣ್ಣು ಕೂತಂತೆ
ಜೀವನದ ಹಾಳೆಯಲವರನು ಚಿತ್ರಿಸಿ
ಮನೆ ಮನದಂಗಳದಲಿ ಚಿಲಿ - ಪಿಲಿ
ರಾಗವನು ಪಸರಿಸುವ ಮನೆ ಮಂದಿ
ಬಾಳ ಬಂಡಿಯ ಬದುಕಿನ ಬಣ್ಣಗಳಂತೆ
ಮನೆಗೆ ಮನಕೆ ಮುದದಲಿ ಅಲಂಕರಿಸಿ
ಇಂದ್ರಿಯ ಬಣ್ಣಗಳನು ಜೊತೆಗೂಡಿಸಿ
ರತಿ ಮನ್ಮಥರಾಗಿ ಬಣ್ಣಗಳನು ಹರಿಸಿ
ಹೊಸ ಬಣ್ಣವನು ಬಯಲಿಗೆ ತಂದವರು
ದೇವರವರು ಗುಡಿಯಲಿಟ್ಟು ಪೂಜಿಸಿ
ಬಣ್ಣ ಬಣ್ಣದ ಬಗೆ ಬಗೆ ಬದುಕಲಿ
ಬಡಿವಾರ ಬಯಸದೆ ಬಣ್ಣಾಚಾರನಾಗಿ
ಬರವಣಿಗೆಯ ಬಣ್ಣವನು ಬಿತ್ತರಿಸುತಾ
ಬಣ್ಣ ಬಣ್ಣಗಳನು ಒಂದುಗೂಡಿಸಿ
-ಯೋಗೇಂದ್ರಾಚಾರ್ ಎ ಎನ್
No comments:
Post a Comment