ಹೊಸತರ ಹುಡುಕಟದಲ್ಲಿ ಯುವ ಮನಸ್ಸುಗಳ ಸಂಚಾರ.... ನಿಮ್ಮ ಬರಹಗಳನ್ನು ಇಲ್ಲಿಗೆ ಕಳಿಸಿ.. mathinakatte@yahoo.com

ಅದ್ಬುತದಲ್ಲಿ ಅದ್ಬುತ ಪ್ರೇಮ!?

     ಒಂದು ದಿನ ಪೆಪರ್ನನಲ್ಲಿ ಕಥೆ ಓದುವಾಗ ನನಗೂ ಒಂದು ಪ್ರೇಮವಾದ ಘಟನೆ ನೆನಪಾಯಿತು. ಮನಸ್ಸಿಗೆ  ಏನೋ ತಾಗಿದಂತಾಗಿ ಮುಖದಲ್ಲಿ ಮಂದಹಾಸ ಮೂಡಿ ಮರೆಯಾಯ್ತು. ಈಗ ಆತ ಎಲ್ಲಿದ್ದಾನೊ ಹೇಗಿದ್ದಾನೂ ಗೊತ್ತಿಲ್ಲ. ಆದರೆ ನನ್ನ ಬತ್ತಿದದೆಯಲ್ಲಿ ಮಾತ್ರ ಸದಾ ಚಿಗೂರೊಡೆದು ಹಸಿರಾಗಿ ನಳ ನಳಿಸಿದ್ದಾನೆ. ಅದೇ ಬೆರಗು ಮೂಡಿಸುವ ನಗುವಿನೊಂದಿಗೆ  ಬಾಳೆಯಂತ ತೊಳಾ ತಿರುವುತಾ ಅವನು ನನ್ನ ಬಳಿ ಬರುತ್ತಿದ್ದುದೆ ಒಂದು ಕಣ್ಣಿಗೆ ಹಬ್ಬ. ಈಗ್ಗೆ  ಸುಮಾರು  ವರ್ಷಗಳ ಹಿಂದೆ   ಬಸ್ ಸ್ಟ್ಯಾಂಡ್ನನಲ್ಲಿ ಸಿಕ್ಕ .ನಾನು ಬಸ್ ಕಾಯುತ್ತಿದ್ದೆ ಭವಿಷ್ಯ ಅವನು  ಅದೇ ಹಳ್ಳಿಗೆ ಅದೆ ಬಸ್  ಕಾಯುತ್ತಿದ್ದ

ಅಂದುಕೊಳ್ಳುತ್ತೇನೆ .ಎಲ್ಲಿಗೆ ಎಂದು ವಿಚಾರಿಸಿದ ನಾನು ನಮ್ಮ ಹಳ್ಳಿಯ ಹೆಸರು ಹೇಳಿದೆ  ಓಹ್ ನಾನು ಕೂಡ ಅಲ್ಲಿಗೆನೆ ನಾನು ರಾಮಣ್ಣ ಅವರ ಮನೆಯಲ್ಲಿ ಕೆಲಸದ ನಿಮಿತ್ತ ಉಳಿದುಕೊಂಡಿದ್ದೇನೆ ಎಂದ. ಹೀಗೆ ಅದು ಇದು ಮಾತಾನಾಡುತ್ತ ಮನಸ್ಸಿನಲ್ಲೆ ಏನೇನೂ ಲೆಕ್ಕಾಚಾರ ಹಾಕುತ್ತಿದ್ದ ದಿನಗಳೆದಂತೆ ಮಾತನಾಡತೊಡಗಿದೆವು. ನೋಡತೊಡಗಿದೆವು ಏಕೊ ಬರು ಬರುತ್ತ ಪರವಶರಾದಂತೆ ಒಂದು ದಿನ ನೊಡದೆ ಹೋದರು ಮನಸ್ಸು ತಲ್ಲಣಿಸುತ್ತಿತ್ತು. ಆದರೆ ಒಬ್ಬರಿಗೆ ಒಬ್ಬರು ಮನಸ್ಸಿನ ಮಾತು ಹೇಳಲು ಪದಗಳು ಸಹಕರಿಸದೆ ತಡಕಾಡಿದ್ದು ಉಂಟು. ಹೇಳಿದರೆ ಎಲ್ಲಿ ಎನಾಗುವುದೂ ಎಂಬ ಅಳುಕು ಇಬ್ಬರಿಗೂ ಇತ್ತು  ಎನ್ನಿಸುತ್ತದೆ .ಹೊಲ ಗದ್ದೆ ತೋಟ ಹೊಳೆ ಹಳ್ಳ ಹೀಗೆ ಎಲ್ಲೆಂದರಲ್ಲಿ ದನ ಕರು ಮೇಯಿಸುವಾಗ ಜೊತೆ ಜೊತೆಗೆ ಇರುತ್ತಿದ್ದೇವು.ಬುತ್ತಿ ಇಬ್ಬರು ಹಂಚಿ ತಿನ್ನುತ್ತಿದ್ದೇವು ಮರಹತ್ತಿ ಮಾವಿನ ಕಾಯಿ ಕಿತ್ತು ತರುತ್ತಿದ್ದ ಒಂದೇ ಕಾಯಿಯನ್ನು ಇಬ್ಬರು ಕಚ್ಟಿ ಕಚ್ಚಿ ತಿನ್ನುತ್ತಿದ್ದೇವು.
     ಒಂದು ವಾರ ಕಳೆಯಿತು ಅವನ ಮುಖ ದರ್ಶನವಿಲ್ಲ ಏನಾಯಿತು ಎಂದು ತಿಳಿಯಲು ಪೋನಿಲ್ಲ ಈಗಿನಂತೆ ವಾಟ್ಸಪ್ ಆಗಲಿ ಫೆಸ್ಬುಕ್ ಆಗಲಿ ಯಾವೂದು ಇರಲಿಲ್ಲ. ಪತ್ರ ಬರೆಯಬಹುದಿತ್ತು  ಆದರೆ ಬರೆಯುವ ಹಾಗಿರಲಿಲ್ಲ ಏಕೆಂದರೆ ಪೊಸ್ಟ್ ಮಾಸ್ಟರ್ ನನ್ನ ಚಿಕ್ಕಪ್ಪನೆ ಜೊತೆಗೆ ಜಾತಿಯು ಬೇರೆ. ಹೊರ ಊರಿನ ವ್ಯಕ್ತಿಯು ಬೇರೆ.ಆದರೆ ನನ್ನ ಮನಸ್ಸು ವಿಹಲ್ವವಾಯಿತು  ಏಕೊ ತಾಳದಾಯಿತು  ಕೊನೆಗೆ ತಿಳಿದಿದ್ದು ಏನೆಂದರೆ ಗದ್ದೆಗೆ ನೀರು ಹಾಯಿಸಲು ರಾತ್ರಿ ಹೊತ್ತು ಹೋಗಿದ್ದರಿಂದ ಜಾರಿ ಬಿದ್ದು ಕಣ್ಣಿಗೆ ಬಲವಾದ ಎಟು ಬಿದ್ದು ದೂರದೂರಿನಲ್ಲಿ ಆಸ್ಪತ್ರೆಗೆ ಸೇರೆಸಿದ್ದಾರೆಂದು ಆ ಊರು ವಿಳಾಸ ಆಸ್ಪತ್ರೆ ಒಂದೂ ತಿಳಿಯದು. ಯಾರನ್ನು ಕೂಡ ಕೇಳುವಂತಿರಲಿಲ್ಲ ಎನು ಮಾಡಬೇಕು ತೊಚದೆ ಅಂತರ್ಮುಖಿ ಆಗಿಬಿಟ್ಟೆ. ಒಳಗೊಳಗೆ ಕುಸಿಯುತ್ತಿದ್ದೆ ಅವನು ಓಡಾಡಿದ ಹೊಲ ಗದ್ದೆಗಳಲ್ಲಿ ನಡೆದಾಡುತ್ತಿದ್ದೆ ಜೋರಾಗಿ ಗಾಳಿ ಬೀಸಿದರೆ ಅವನೆ ಬಂದನೆನೂ ಅಂತ ಸುತ್ತ ಮುತ್ತ ಹುಡುಕಾಡುತ್ತಿದ್ದೆ ದೂರದಲ್ಲಿ ಯಾರಾದರೂ ಬರುವುದು ಕಂಡರೆ ಸಧ್ಯ ಬಂದನಲ್ಲ ಎಂದು ಸಮಾಧಾನದ ನಿಟ್ಟುಸಿರು ಬಿಟ್ಟು ಎಳೆದುಕೊಳ್ಳುವುದರೊಳಗಾಗಿ ಆ ವ್ಯಕ್ತಿ ಬೇರೆ ಯಾರೂ ಆಗಿರುತ್ತಿದ್ದ .ಹಳ್ಳಿಯ ಹುಡುಗಿಯರು ಒಳ್ಳೆಯ ಮನಸ್ಸಿನವರು ಎಂದು   ಅವನು ಹೇಳಿದ ಮಾತುಗಳು  ಪದೆ ಪದೆ ನೆನಪಾಗುತ್ತಿದ್ದವು ನಮ್ಮ ದನಗಳು ಬೇರೆಯವರ ಹೊಲ ಗದ್ದೆಯಲ್ಲಿ ಮೇಯುತ್ತಿದ್ದವು ನಮ್ಮ ಗದ್ದೆಯಲ್ಲಿ ಬೆರೆಯವರ ಜಾನುವಾರುಗಳು ಮೆಯುತ್ತಿದ್ದರು ನನಗೆ ಒಂದು ತಿಳಿಯುತ್ತಿರಲ್ಲಿಲ್ಲ ಮನೆಯಲ್ಲಿ ಹಾಲುಕ್ಕಿದರು, ಅನ್ನ ತಳ ಹತ್ತಿದರು, ಸಾರುಸಪ್ಪೆ ಆದರು ಉಪ್ಪು ವೀಪರೀತ ವಾದರು  ತಿಳಿಯದ ಎಷ್ಟೋ ಅನಾಹುತಗಳಿಗೆ ಸಾಕ್ಷಿ ಆದೆ .  ಅಷ್ಟೇ ಎಕೆ ಕೊನೆಗೆ ನನ್ನ ಜೀವವು ನನ್ನ ಕೈಯಲ್ಲಿ ಇರಲಿಲ್ಲ ಹೇಗೊ ಆಸ್ಪತ್ರೆ ಊರು ತಿಳಿದುಕೊಂಡೆ ಆದರೆ ನನ್ನ ಬಳಿ ಹಣ ವಿರಲಿಲ್ಲಿ ಸಾಲ ಕೇಳಿ ಪಡೆದು ಕೊಳ್ಳಲು ಅಂತ ವ್ಯಾವಹಾರಸ್ಥೆ ಅಲ್ಲ.  ಆದರೂ ಅವನನ್ನು ನೋಡುವ ತೀವ್ರ ಹಂಬಲ ನನ್ನನ್ನು ಕಿತ್ತು ತಿನ್ನುತ್ತಿತ್ತು ನಾನು ರಾಜಿ ಆಗುವ ಸ್ಥಿತಿಯಲ್ಲಿ ಇರಲಿಲ್ಲ ಅವನನ್ನು ನೋಡುವುದೆ ಜೀವನದ ಗುರಿ ಮತ್ತು ಇದೊಂದೆ ಆಸೆಯಾಗಿತ್ತು.  ಹಾಗಾಗಿ ಕೂಲಿ ಮಾಡಿದ ಭತ್ತ ಅವರವರ ಬಳಿಯೆ ಇತ್ತು ಅದನ್ನೇಲ್ಲ ಅಳೆಸಿಕೊಂಡು ನಮ್ಮ ಮನೆಯ ತಿಪ್ಪೆನಲ್ಲಿ ಚೀಲದಲ್ಲಿ ಹಾಕಿ ಮುಚ್ಚಿಡುತ್ತಿದ್ದೆ ಹಾಗೂ ಹೀಗೂ ಒಂದು ಚೀಲ ಮಾಡಿ ಮಿಲ್ಲೆಗೆ ಹೋಗುವ ಗಾಡಿಯಲ್ಲಿ  ತುಂಬಿ  ಮಾರಿ ದೂರದ ಊರಿಗೆ ಬಸ್ ಹತ್ತಿದೆ. ಆಸ್ಪತ್ರೆ ಹುಡುಕಿ ಅವನ ರೂಂ ಹಡುಕುವ ಹೊತ್ತಿಗೆ ಸಂಜೆ ಇಳಿಹೊತ್ತು ಆಗಿತ್ತು.   ಜೀವದಲ್ಲಿ ಜೀವವಾಗಿರುವ ಜೀವವನ್ನು ಕಂಡಾಕ್ಷಣ ಇನ್ನೀಲ್ಲದ ಆನಂದ,ಪಲ್ಲವಿಸುವ ಪಲುಕು,ಎದೆ ತುಂಬುವ ನಲಿವು,ತಾಳತಪ್ಪುವ ಉಸಿರಾಟ,ನಾದ-ನೀನಾದದ ಝೇಂಕಾರ,ಮನೆಮಾಡುವ ಗೊತ್ತಿಲ್ಲದ ಆತಂಕ.ಜೀವಸ್ಪಂದನ ಭಾವ ನರ್ತನ.ಬೇವತು ಹೋಗುವ ದೇಹ.ಒಣಗಿಹೋಗುವ ತುಟಿಗಳು ಮಾತು ಬಾರದಸ್ಥಿತಿ.ವ್ಯಕ್ತಪಡಿಸಲಾಗದ ಅವ್ಯಕ್ತಭಾವ.ಸಂದಿಗ್ಧತೆಯ ನೂರೆಂಟು ದಾಹ.ಅವನ ನೋಡಿದ ತಕ್ಷಣ ಕಾಲ ,ವಯಸ್ಸು ,ಕಾರಣ ಮೀರಿ ನನ್ನೂಳಗೆ ಅವನು ಲೀನಾವಾಗಿಬಿಟ್ಟ ಪ್ರೇಮವೆ ಹೀಗೆ.
   ಅವನು ಗಾಡ ನಿದ್ದೆಯಲ್ಲಿದ್ದ ಡಿಸ್ಟರ್ಬ್ ಮಾಡಬಾರದೆಂದು ಹಾಸಿಗೆ ಪಕ್ಕದಲ್ಲೇ ಕಾಯುತ್ತಿದ್ದೆ ಅವನ ಶಾಂತವಾದ ಮುಖ ಮುದ್ರೆಯನ್ನೇ ತದೇಕ ಚಿತ್ತದಿಂದ ನೋಡುತ್ತಲೆ ಇದ್ದೆ ಬೇಕಾದರೆ ಜೀವನ ಇವತ್ತಿಗೆ ಕೊನೆ  ಆಗಲಿ ನನ್ನ ಆಸೆ ಈಡೇರಿಸಿದನಲ್ಲ ಎಂದು ದೇವರಿಗೆ ಮನದಲ್ಲೆ ವಂದಿಸಿದೆ. ನಿಧಾನವಾಗಿ ಕಣ್ಣು ಬಿಟ್ಟ ನನ್ನ ನೋಡಿದೊಡನೆ ಏಳಲು ಪ್ರಯತ್ನಿಸಿದ ಆದರೆ ಕೈ ಕಾಲು ಸಹಕರಿಸುತ್ತಿಲ್ಲ ನಾನೂ ಸಹಾಯ ಮಾಡಿದೆ. ಕಣ್ಣಿನ ಜೊತೆಗೆ ಭುಜದ ಮೂಳೆಯು ಮುರಿದಿತ್ತು  ಹೇಗೂ ಭತ್ತ ಮಾರಿದ ಹಣದಿಂದ ನನ್ನ ಪ್ರೀತಿಯ ಆರೈಕೆಯಿಂದ ಬೇಗ ಗುಣವಾಗುತ್ತಿದ್ದಂಂತಯೆ ನನ್ನ ಆಸೆಗಳು ಗರಿಗೆದರಿದವು ಇವತ್ತಾದರೂ ಇವನಿಗೆಮನದ ಎಲ್ಲಾ ಭಾವನೆಗಳನ್ನು ಹೇಳಿ ಇವರೊಂದಿಗೆ ಬಾಳು ಹಂಚಿಕೊಳ್ಳುವ  ಇವನಿಗಾಗಿಯೆ ಮುಡಿಪಾಗಿದ್ದು ಬದುಕು ಅರ್ಪಿಸಿಬಿಡೋಣ ಎಂದು ತೀರ್ಮಾನಿಸಿದೆ. ಆಸೆಗಳ ಬಾರ ಹೆಚ್ಚಾಗಿ ಹುಚ್ಚಾದೆ. ಖುಷಿಯಿಂದ ಕುಣಿದಾಡುವಂತೆ ಆಗುತ್ತಿತ್ತು. ಅವನ ನೋಟ ಹಾವ ಭಾವದಿಂದಲೆ ತಿಳಿದುಕೊಂಡಿದ್ದೆ  ಅವನಿಗೂ ನನ್ನ ಮೇಲೆ ಮನಸ್ಸಿದೆ ಎಂದು. ಭವಿಷ್ಯ ಪ್ರೇಮ ಭೂಮಿಯ ಮೇಲೆ ಇರದಿದ್ದರೆ ಇದು ಗೋರಿಯಾಗುತ್ತಿತ್ತೊ ಏನೊ?
     ಪ್ರೇಮ ಅದ್ಬುತಗಳ ಅದ್ಭುತ ,ಅಚ್ಚರಿಗಳ ಅಚ್ಚರಿ,  ಇದರಲ್ಲಿ ನೋವು ನಲಿವು ಸು:ಖ  ದು:ಖ ಎಲ್ಲವೂ ಇದ್ದಿದೆ, ನಾಮಿಯಂತ ಮಾರಣ ಹೋಮ,ಮಾಮರದ ಚಿಗುರು, ಕೋಗಿಲೆಯ ಇಂಚರ, ಇಂಪಾದ ಹಾಡು, ತಂಪಾದ ಗಾಳಿ ,ಎಲ್ಲವೂ ಸೆರಿದ್ದೆ .ಪ್ರಕೃತಿಗೆ ವಿರುದ್ಧ ವಾಗಿ ನಡೆದು ಹುಲು ಮಾನವ ಗೆದ್ದ ಇತಿಹಾಸ ಉಂಟೇ?
     ಹೀಗೆ ದಿನಗಳು ಕಳೆದಂತೆ ಸುಧಾರಿಸಿಕೊಂಡ.ಡಾಕ್ಟರ್ ನನ್ನ ಕರೆದು ನಿಮ್ಮ ಯಜಮಾನರನ್ನ ಇನ್ನೇನು ಒಂದೇರೆಡು ದಿನಗಳಲ್ಲಿ  ಡಿಸ್ಚಾರ್ಜ   ಮಾಡಿ ಮನೆಗೆ ಕಳಿಸುತ್ತೆನೆಂದು ಹೇಳಿದಾಗ ಆಯ್ತು ಎಂದು ತಲೆ ಅಲ್ಲಾಡಿಸಿದರು ಮೈಯಲ್ಲ ರೋಮಾಂಚನವಾಗಿ ಸ್ವರ್ಗ ಭೂಮಿಗೆ ಬಂದಂತಾಯ್ತು ಇವತ್ತು ಏನಾದರಾಗಲಿ ಮನಸ್ಸು ಬಿಚ್ಚಿ ಮಾತಾನಾಡಿಬಿಡಬೇಕು ಎಂದು ಖುಷಿಯಿಂದ ಕಾಫಿ ಬ್ರೇಡ್ ತೆಗೆದುಕೊಂಡು  ರೂಮಿನ ಬಾಗಿಲ ಬಳಿ ಬಂದೆ ಶಾಕ್.!?
ಅವನ ಅಪ್ಪ ಅಮ್ಮ ಅಣ್ಣಾ ಎಲ್ಲರೂ ಬಂದು ಊರಿಗೆ ಹೊರಡುವ ತಯಾರಿಯಲ್ಲಿದ್ದಾರೆ ಮದುವೆ ಮಾತು ಕಥೆ ಆಗಿದೆ ಇನ್ನೂ ಊರಿನಲ್ಲೆ ಇರು ಎಂದೆಲ್ಲಾ ಪ್ಲಾನ್ ಮಾಡುತ್ತಿದ್ದರು .ನನಗೆ ಭೂಮಿ ಕುಸಿದ ಅನಭವ. ಆಸೆ ನಿರಾಸೆಗಳು ನನ್ನ ಅಣಕಿಸಿದವು ಅವನು ವಾರಾಂಡಕ್ಕೆ ಬಂದು "ಮುಂದಿನ ಜನ್ಮವೊಂದಿದ್ದರೆ ಮತ್ತೆ ಸೀಗೋಣ ಜೋಪಾನವಾಗಿ ಊರು ತಲುಪು" ಎಂದು ಹೇಳಿ  ಅವರ ಜೊತೆ ಆಟೊ ಹತ್ತಿದ ಮರೆಯಾಗುವವರೆಗೂ ಅವರನ್ನೇ ನೊಡುತ್ತ ನಿಂತೆ
     ಪ್ರೇಮ ಎಂಬುದೆ ಹಾಗೆ ಎಲ್ಲಿ ಹುಟ್ಟಿ ಎಲ್ಲಿ ಬೆಳೆದು ಯಾವ ಹೃದಯದವನ್ನು ಸೇರುತ್ತದೊ ತಿಳಿಯದು ಈ ಕ್ರಿಯೆಯಲ್ಲಿ ಎಷ್ಟೊಂದು ಹೃದಯದಗಳಿಗೆ ನೋವಾಗುತ್ತೊ ಖುಷಿಯಾಗುತ್ತದೊ ಯಾರು ಯಾರನ್ನ ಕಳೆದುಕೊಳ್ಳತ್ತಾರೊ  ದೇವರಿಚ್ಚೇ. ಅಂತು ಪ್ರೇಮವೆಂಬ ಜಾತ್ರೆಯು ಯಾವ ಯಗ್ಗು ತಗ್ಗಿಲ್ಲದೆ ನಿರಂತರವಾಗಿ ವಿದ್ಯುತ್ ಪ್ರವಹಿಸಿದಂತೆ ಹರಿಯುತ್ತಲೆ ಇರುತ್ತದೆ. ಏನೇ ಆಗಲಿ "ಪ್ರೇಮಿಸದೆ ಇರುವವರಿಗಿಂತ  ಪ್ರೇಮಿಸಿ ಸೋಲುವುದು ಕೂಡ ಒಂದು ಅನುಭವವೆ"  ಅವನು ಎಲ್ಲಿದ್ದರೂ ಹೇಗಿದ್ದರೂ  ಸುಖವಾಗಿರಲಿ   ಜೀವನ ಮುಗಿಯುವುದರೊಳಗೆ ನನ್ನ ಕಣ್ಣು ಅವನನ್ನೊಮೆ ನೋಡಬೇಕಿದೆ ಯಾರಿಗಾದರೂ ಸಿಕ್ಕರೆ ನನ್ನ ಕೊನೆಯ ಆಸೆಯನ್ನು ಅವನಿಗೆ ತಿಳಿಸಿ ಇದೊಂದೆ ನನ್ನ ಹಾರೈಕೆ
-ಶಾಂತಅತ್ನಿ ಹಾಸನ 

1 comment:

  1. ತುಂಬಾ ಚೆನ್ನಾಗಿದೆ.... ಭಾವ ತುಂಬಿ ಬರೆದಿದ್ದೀರಿ👌👌💐

    ReplyDelete