ಹೊಸತರ ಹುಡುಕಟದಲ್ಲಿ ಯುವ ಮನಸ್ಸುಗಳ ಸಂಚಾರ.... ನಿಮ್ಮ ಬರಹಗಳನ್ನು ಇಲ್ಲಿಗೆ ಕಳಿಸಿ.. mathinakatte@yahoo.com

ಸಮ್ಮಿಲನ

ಖಾಲಿಹಾಳೆಗೂ ಕಪ್ಪು ಶಾಯಿಗೂ
ಅಂತರಾಳದ ಮಿಲನ
ಮೊದಲ ಪ್ರೇಮಕಾವ್ಯ

ತಂತಿ ಮೀಟಿದ ವೀಣೆ
ಸ್ವರ ರಾಗ ತಾಳ
ಪಲ್ಲವಿ ಚರಣ ಸಂಗೀತ

ಅಕ್ಷರ ಪದಗಳ
ಸಾಲು ಸಾಲು
ಕವಿತೆಗಳ ಮಿಲನ


ಬಣ್ಣ ಭಾವನೆ ಚಿತ್ತಾರ  ಚಂದಿರ
ತಾರೆಗಳೊಂದಿಗೆ ಸರಸ
ರೂಪ ರಸ ಗಂಧ ಗಾಳಿ
ಆಲಾಪಕೆ ಹೊಸ ಪರಿಚಯ

ಮೇಘ ಮಿಡಿಯಲು
ಸಾಂಗತ್ಯದ ಮಿಲನ
ಸಮ್ಮಿಲನಕೆ
ಹೊಸ ತುಂತುರು ಮಳೆ

ಜೀವ ಜೀವಗಳು ಬೆರೆತು 
ಮೂಡಿದ ಸಲ್ಲಾಪ 
ಹನಿ ಹನಿ ಪ್ರೀತಿ ಗುಟುಕಿನ 
ಹೊಸ ಪ್ರೇಮಕಾವ್ಯ ಸಮ್ಮಿಲನ


- ಡೀಪ್ತಿ ಬಸವಾಪುರ

No comments:

Post a Comment