ಸರಣಿ ಗೊಂದಲ ಮಧ್ಯದೊಳಗೆನರಳುತಿಹ ಹೆಣ್ಣೆಂಬ ಜೀವ
ಲೋಕದೆದುರು ಬಿಚ್ಚ ಹೊರಟಲು
ತನ್ನ ಪಾಲಿನ ವ್ಯಥೆಯನು ...
ಮುದದಿ ತಿಳಕವನಿಟ್ಟುಕೊಂಡು
ಹೆಣೆದ ಜಡೆಯ ಹಾಕಿಕೊಂಡು
ಹೊರಟು ಬಂದರೆ ಅಲ್ಲಿ ಅವಳೇ
ಸಾಕ್ಷತಾ ಮಹಾಲಕ್ಷ್ಮಿಯೂ ...
ಪ್ರೀತಿಯೊಂದು ಮೋಸವಯ್ಯ
ಪ್ರೀತಿಯಲ್ಲಿ ನೋವೆ ಎಲ್ಲ
ಹೃದಯ ಮುರಿದು ಹೊರಟು ಹೋದನು
ಕೈಯ ಹಿಡಿಯುವ ಮುನ್ನವೇ ...
ಕಣ್ಣ ನೋಟದಿ ಮನವು ಕರಗಿ
ಗಂಡು ಗಾಂಬೀರ್ಯಕ್ಕೆ ತಿರುಗಿ
ನನ್ನ ನಾಶವ ಮಾಡಲೆಂದು
ಅಂದು ಬಂದನು ಹತ್ತಿರ ....
ಪ್ರೀತಿಯೆಂಬ ಬಲೆಗೆ ಸಿಕ್ಕಿ
ಮೋಸ ಹೋದೆನು ಅಂದು ನಾನು
ಹಸುಳೆಯೊಂದು ಹೊಟ್ಟೆಯೊಳಗೆ
ಪ್ರಾಣ ಭಿಕ್ಷೆಯ ಕೇಳಿದೆ ....
ಜಗವ ಅರಿಯದ ಹಸುಳೆಯೊಂದು
ಜಗವ ಕಾಣಲು ಹೊರಟು ಬರಲು
ಹೆಣ್ಣು ಕಂದಾ ಎಂದು ಅರಿತು
ಪ್ರಾಣ ತೆಗೆದೇ ಬಿಟ್ಟ್ಟರು ...
ರಕ್ಷಿಸಲು ಹೊರಟವರೆ ಇಲ್ಲ
ಭಕ್ಷಕರು ಆಗಿಹರು ಎಲ್ಲ
ರಕ್ಷಣೆಯು ಎಲ್ಲೊದಗಿಹೆಂದು
ಉತ್ತರವ ನೀ ನೀಡಯ್ಯ ....
ಹೆಣ್ಣು ಶೋಷಣೆ ಪಾಪವಯ್ಯ
ಹೆಣ್ಣ ಕಂಬನಿ ಶಾಪವಯ್ಯ
ಹೆಣ್ಣು ಲೋಕದಿ ಗೊಂಬೆಯಂತೆ
ನರ್ತನೆಗೆ ಬಲಿಯಾದಳು ....
ನಗಲು ಬೇಡಿ ಜನರೆ ನೀವು
ಗಂಡು ಕಾರಣ ಹೀಗೆ ನಾನು
ನಾನು ಮಾಡಿದ ಪಾಪವೇನು
ನನ್ನ ಹುಚ್ಚಿ ಹೆಣ್ಣಳು ...
ದೇವರೇ ನೀ ನಿಜವೆನಯ್ಯ
ಹೆಣ್ಣು ಜನುಮವು ಬೇಡವಯ್ಯಾ
ಎನ್ನ ಜೀವ ತೆಗೆದು ಕೊಂಡು
ಎನಗೆ ನೀಡು ಮೋಕ್ಷವಾ .....
-ಮಹಮ್ಮದ್ ಆಸೀಫ್
No comments:
Post a Comment