ಸೃಷ್ಟಿಯ ಮಾಯೆಯೇ ಒಂದು ರೀತಿಯ ಅಚ್ಚರಿ, ಅಮೋಘ, ಅಗಾಧ. ಸರ್ವಸ್ವವನ್ನು ತನ್ನ ಒಡಲಲ್ಲಿ ಇರಿಸಿಕೊಂಡು ಜೀವನದ ಜಂಜಾಟದಲ್ಲಿ ಬೇಸತ್ತಿರುವ ಮನಸ್ಸುಗಳನ್ನು ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ತಣಿಸುತ್ತಾ... ಕೊನೆಗೊಮ್ಮೆ ಮುನಿದರೆ ಸರ್ವಸ್ವವನ್ನು ನೆಲಸಮ ಮಾಡುವ ಕಾರ್ಯ ವೈಖರಿಗೆ ಪ್ರಕೃತಿಯನ್ನು ಬಿಟ್ಟರೆ ಹೋಲಿಕೆ ಬೇರೊಂದಿಲ್ಲ.
ಹೀಗೆ ನಿಸರ್ಗದೊಂದಿಗೆ ಕಲೆತು ತಮ್ಮ ಬರಹಗಳನ್ನು ಅದರೊಟ್ಟಿಗೆ ಹೆಣೆದು ಪ್ರಪಂಚಕ್ಕೆ ಉಣಬಡಿಸಿದವರು 'ಪೂರ್ಣಚಂದ್ರ ತೇಜಸ್ವಿ' ಯವರು ತಮ್ಮ ಸರಳ ಭಾಷಾ ಶೈಲಿಯಲ್ಲಿ, ಹಾಸ್ಯದ ಹೊನಲಲ್ಲಿ ಕಂಡದ್ದನ್ನು ಕಂಡಂತೆ, ಕಲ್ಪನೆಯ ಲೋಕದಲ್ಲಿ ಕಳೆದು ಬಿಡುವಂತೆ ಮಂತ್ರಮುಗ್ಧರನ್ನಾಗಿಸುವ ಬರವಣಿಗೆಯ ಶೈಲಿಗೆ, ಬಹುತೇಕ ಓದುಗರಿಗೆ ಅವರೊಬ್ಬ ಅಚ್ಚು ಮೆಚ್ಚಿನ ಬರಹಗಾರರು. ಅವರು ನೆಲೆಸಿದ್ದ ಮೂಡಿಗೆರೆಗೂ ನನ್ನೂರಿಗೂ ಕೇವಲ 20 ಕಿಲೋಮೀಟರ್ ಗಳ ಅಂತರ. ಅದಕ್ಕಾಗಿಯೇ ಏನೋ ಅವರು ತಮ್ಮ 'ಕರ್ವಾಲೋ' ಕೃತಿಯಲ್ಲಿ ಉಲ್ಲೇಖಿಸುವ ಹಲವಾರು ಸ್ಥಳಗಳು ಚಿರಪರಿಚಿತ ಹಾಗು, ರಚಿಸಿ ಚಿತ್ರಿಸಿದ ಸನ್ನಿವೇಶಗಳೆಲ್ಲವೂ ನನ್ನ ಕಣ್ಣ ಮುಂದೆಯೇ ನಡೆದಂತೆ ಭಾಸವಾಗಿ ಓದಿ ಮುಗಿಸಿದ ಮೇಲೆ ಮನಸ್ಮೃತಿಯಲ್ಲಿ ಕಾಡುತ್ತಿದೆ.
ಇಂದಿಗೂ ಮಲೆನಾಡಿನ ರೈತರು ಅನುಭವಿಸುತ್ತಿರುವ ಕೃಷಿಗೆ ಸಂಬಂಧಿಸಿದ ಕಷ್ಟ ಕಾರ್ಪಣ್ಯಗಳನ್ನು ತೇಜಸ್ವಿಯವರು ಅಂದು ಸ್ವತಃ ಅನುಭವಿಸಿದ್ದರು. ವ್ಯವಸಾಯದಿಂದ ಲಾಭವಿರಲಿ ಸಾಲದ ಬಡ್ಡಿಯನ್ನು ಕಟ್ಟಲು ಪರದಾಡುವ ರೈತರ ಪಾಡುಗಳನ್ನು ತುಂಬಾ ಹತ್ತಿರದಿಂದಲೇ ನೋಡಿದ್ದರೆಂಬುದು ಕೃತಿಯಿಂದ ತಿಳಿದು ಬರುತ್ತದೆ.
ತೇಜಸ್ವಿಯವರೊಂದಿಗೆ ಕಥೆಯುದ್ದಕ್ಕೂ ಬರುವ ಕರ್ವಾಲೋ, ಮಂದಣ್ಣ ,ಪ್ರಭಾಕರ, ಪ್ಯಾರ, ಬಿರಿಯಾನಿ ಕರಿಯಪ್ಪ , ಸ್ಪಾ ನಿಯರ್ ಜಾತಿಯ ಬಿಳಿಯ ನಾಯಿ 'ಕಿವಿ' ಹಾಗು 'ಹಾರುವ ಓತಿ' ಮುಂತಾದ ಪಾತ್ರಗಳು ನೈಜತೆಗೆ ಹಿಡಿದ ಕೈಗನ್ನಡಿಯಂತೆ ಭಾಸವಾಗುತ್ತದೆ.
ಕರ್ವಾಲೋ ಒಬ್ಬರು ಸಸ್ಯ ವಿಜ್ಞಾನಿ ಮತ್ತು ಕೀಟಶಾಸ್ತ್ರಜ್ಞರು, ತೇಜಸ್ವಿಯವರಿಗೆ ಕೀಟಗಳ ಬಗ್ಗೆ ಜೇನು ನೊಣಗಳ ಬಗ್ಗೆ ಆಸಕ್ತಿ ಹುಟ್ಟುವಂತೆ ಮಾಡಿದವರು. ಮಂದಣ್ಣ ಒರ್ವ ಸಾಮಾನ್ಯ ಮನುಷ್ಯ , ನೋಡುಗರ ಕಣ್ಣಿಗೆ ಹಳ್ಳಿಗಮಾರ, ಹುಳ-ಹುಪ್ಪಟೆ, ಪ್ರಾಣಿಗಳೆಂದು ಕಾಡು-ಮೇಡು ಅಲೆಯುವವ. ಆದರೆ ಕರ್ವಾಲೋರವರ ಪ್ರಕಾರ ಅವನೋರ್ವ 'ವಂಡರ್ ಫುಲ್ ಫೆಲೋ' ಹಾಗೂ ಅವರ ಶಿಷ್ಯ. ಕರ್ವಾಲೊರವರ ರಿಸರ್ಚ್ ಗೆ ಬೇಕಾದ ಸ್ಪೆಸಿಮನ್ ಗಳನ್ನು ಒದಗಿಸುತ್ತಿದ್ದ.
ಹಾಗೆಯೇ ಈ ಕೃತಿಯ ಕಥಾವಸ್ತು 'ಹಾರುವ ಓತಿ' ಈ ಜಾತಿಯ ಓತಿಗಳು ಚರಿತ್ರ ಪೂರ್ವ ಪ್ರಾಚೀನ ಯುಗಗಳಿಗೆ ಸೇರಿದವು. ಇವೇ ಮುಂದೆ ಬೃಹದಾಕಾರದ ಪ್ರಾಣಿಗಳಾಗಿ ಬೆಳೆದು ಇಡೀ ಭೂಮಂಡಲದಲ್ಲಿ ವ್ಯಾಪಿಸಿ ಕೊನೆಗೊಂದು ದಿನ ಯಾವುವೋ ಅಗೋಚರ ಕಾರಣಗಳಿಂದಾಗಿ ಅವುಗಳೆಲ್ಲ ಸರ್ವನಾಶ ಹೊಂದಿ ನಾಮವಶೇಷವಾದವು. ಆದರೆ ಒಂದೆರಡು ಪ್ರಾಣಿಗಳು ಭೂಮಿ ಮೇಲೆ ಹೊಂದಿಕೊಂಡು ಉಳಿದುಬಿಟ್ಟವು. ಹಾಗಾಗಿ ಇವುಗಳು ಕೋಟ್ಯಾಂತರ ವರ್ಷಗಳ ಹಿಂದಿನ ಗುಟ್ಟನ್ನೆಲ್ಲ ಹೊಟ್ಟೆಯೊಳಗೆ ಇಟ್ಟುಕೊಂಡು ಅಪೂರ್ವ ಜೀವಿಗಳಾಗಿವೆ. ಹಾರುವ ಓತಿ ಗಾಗಿ ಅದೆಷ್ಟೋ ವಿಜ್ಞಾನಿಗಳು, ಸಂಶೋಧಕರು ತಮ್ಮ ಜೀವನವನ್ನು, ಹಣವನ್ನು ಹಾಗು ಸಮಯವನ್ನು ಮುಡುಪಾಗಿಟ್ಟು ಹುಡುಕಿದರು ಯಾರಿಗೂ ದಕ್ಕಿರಲಿಲ್ಲ. ಇಂತಹ ಪ್ರಾಣಿ ಮಂದಣ್ಣನ ಕಣ್ಣಿಗೆ ಬಿದ್ದದ್ದು ಮಾತ್ರ ಅಚ್ಚರಿಯ ಸಂಗತಿ. ಹಾಗಾಗಿಯೇ ಇವನು ಒಂದು ರೀತಿ ಕರ್ವಲೋರವರಿಗೆ ಆತ್ಮೀಯ ಶಿಷ್ಯ.
ಇದರ ನಡುವೆ ಮಂದಣ್ಣ ಸಣ್ಣಪುಟ್ಟ ವವತಾಪತ್ರಯಗಳಲ್ಲಿ ಸಿಕ್ಕಿಹಾಕಿಕೊಂಡು ಆ ಸಂಕೋಲೆಯಿಂದ ಬಿಡುಗಡೆಗೊಳಿಸಲು ತೇಜಸ್ವಿಯವರು, ಕರ್ವಾಲೋರವರು, ಪ್ರಭಾಕರ್ ಅವರು ಹೈರಾಣಾಗಿದ್ದರು. ಅಂತೂ ಸಕಲ ಸಿದ್ಧತೆಗಳನ್ನು ಪೂರೈಸಿಕೊಂಡು ಆ ದುರ್ಗಮ ಕಾಡಿನೊಳಗೆ ಪ್ರವೇಶಿಸಿ ಹಾರುವ ಓತಿಯನ್ನು ಸೆರೆ ಹಿಡಿಯಲು ಪಣತೊಟ್ಟು ನಿಂತರು. ನೋಡುಗರ ಕಣ್ಣಿಗೆ ಇವರದೊಂತರಾ ತಮಾಷೆಯ ಚಟುವಟಿಕೆಗಳಂತೆ ಕಂಡರೂ, ಕಾಣದ ಯಾವುದೋ ರಹಸ್ಯವನ್ನು ಭೇದಿಸಲು ಹೊರಟವರ ಹುಮ್ಮಸ್ಸು ಪ್ರಶಂಸನೀಯವಾದುದು.
ಸಾಗುವ ದಾರಿಯಲ್ಲಿ ಎದುರಾಗುವ.ಎಡರು ತೊಡರುಗಳು ಮಂದಣ್ಣ ಕರಿಯಪ್ಪರ ಕೆಲವು ಮೂರ್ಖವರ್ತನೆಗಳು , ಬೇಟೆ ಕಂಡೊಡನೆ ಹಿಂದೆ 'ಕಿವಿ' ಯನ್ನು ಛೂ ಬಿಟ್ಟು ಹಿಂದಿನಿಂದ ಬಂದೂಕು ತೆಗೆದುಕೊಂಡು ಹೋಗುವ ಕರಿಯಪ್ಪ, ಒಂದೊಂದು ಬಾರಿ ಕಿವಿಗೆ ಏನಾದರೂ ಅನಾಹುತ ಮಾಡಿ ಬಿಡುವನೆ ಎಂಬ ಚಿಂತೆ ಒಂದೆಡೆಯಾದರೆ ಬೇಟೆಯನ್ನು ಅರಸಿ ಹೊರಟ ಕಿವಿ ಎಷ್ಟೊತ್ತಾದರೂ ಹಿಂದಿರುಗಿ ಬಾರದ ಸನ್ನಿವೇಶಗಳು ಎದೆ ಬಡಿತವನ್ನು ಹೆಚ್ಚಿಸುವಂತಹ ಅನುಭವವನ್ನು ಉಂಟುಮಾಡುತ್ತವೆ.
ಕಾಡಿನ ವರ್ಣನೆ, ಅಲ್ಲಿನ ಜೀವ ಸಂಕುಲಗಳ ವಿವರಣೆ ಒಂದು ಅದ್ಭುತ ಕಾಡನ್ನು ಸ್ವತಃ ಪ್ರವೇಶಿಸಿದುದರ ಅನುಭವವನ್ನುಂಟು ಮಾಡುತ್ತವೆ.
ಅಂತೂ ಅನ್ವೇಷಣೆಯ ಕೊನೆಯ ಘಟ್ಟದ ಪ್ರವೇಶವಾಗುತ್ತದೆ ಇಷ್ಟೊಂದು ದಿನಗಳು ನೂರೆಂಟು ಕನಸು ಆಲೋಚನೆಗಳನ್ನು ಪ್ರಚೋದಿಸಿದ ಅದ್ಭುತ ಸರಿಸೃಪ ಹಾರುವ ಓತಿಯ ದರ್ಶನ ಮೊದಲಿಗೆ ತೇಜಸ್ವಿಯವರಿಗೆ ದಕ್ಕುತ್ತದೆ. ಕೊನೆಗೂ ಅದನ್ನು ಪತ್ತೆ ಹಚ್ಚುವಲ್ಲಿ ಎಲ್ಲರೂ ಸಫಲರಾಗುತ್ತಾರೆ. ಅದನ್ನು ಅವರು ಸೆರೆಹಿಡಿಯಲು ಮಾಡುವ ಹರಸಾಹಸಗಳೆಲ್ಲವು ಮೈನವಿರೇಳಿಸುತ್ತವೆ, ರೋಚಕವೆನಿಸುತ್ತದೆ.
ಅಂತೂ ಕೊನೆಗೂ ವಿಷಾದವನ್ನುವಂತೆ ಹಾರುವ ಓತಿ ಯಾರ ಕೈಗೂ ಸಿಗದೇ ಅನಂತ ಶೂನ್ಯದಲ್ಲಿ ಕರಗಿದ್ದನ್ನು ವಿವರಿಸುವಾಗ ಒಂದು ರೀತಿಯ ನಿರಾಶಾಭಾವನೆ ಕಥೆ ಮುಗಿದ ನಂತರವೂ ಕಾಡುತ್ತದೆ.
ಅಂದು ರಾತ್ರಿ ಹುಣ್ಣಿಮೆಯೆಂದು ಹಳೆಮನೆಯ ಅಟ್ಟದ ಮೇಲೆ ಕಟ್ಟಿದ ಜೇನು ಗೂಡಿನಲ್ಲಿದ್ದ ತುಪ್ಪವನ್ನು ಸಂಗ್ರಹಿಸಿದಾಗ ಜೇನುನೊಣಗಳು ಹೇಗೆ ಕರ್ವಾಲೋ ಕೃತಿಯಲ್ಲಿ ಎಲ್ಲರನ್ನೂ ಕಚ್ಚಿದಂತೆ ನನ್ನಪ್ಪನನ್ನು ಕಚ್ಚಿಲ್ಲ ಎಂದು ಯೋಚಿಸುತ್ತಲೇ ಜೇನುತುಪ್ಪವನ್ನು ಕಾಲಿಮಾಡಿದ್ದೆ. ಮಳೆ ನಿಂತರೂ ಮರದ ಹನಿ ನಿಲ್ಲದು ಎಂಬಂತೆ ಓತಿಗಳನ್ನು ನೋಡಿದಾಗಲೆಲ್ಲ ಹಾರುವ ಓತಿ ಕಂಡದಂತೆ ಅನಿಸುತ್ತದೆ. ಮೊನ್ನೆ ಟೆಲಿ(ಸಾಕುಪ್ರಾಣಿ) ಆರ್ಭಟ ಕೇಳಿ ಹೊರಬಂದು ನೋಡಿದಾಗ ಹೂ ತೋಟದ ಬಳಿ ಹೊನ್ನ ಬಣ್ಣದ ಕೆರೆ ಹಾವೊಂದು ಅಟ್ಟಿಸಿಕೊಂಡು ಬಂದಾಗ ತೆಂಗಿನ ಮರವೇರಿ ಕುಳಿತಿದ್ದ ಓತಿಕ್ಯಾತವೊಂದು ಮೂರು ದಿನವಾದರೂ ಅಲ್ಲೇ ಇದ್ದುದ್ದನ್ನು ನೋಡಿ ಹಾರುವ ಓತಿಯ ಲಕ್ಷಣಗಳಿರಬಹುದೇ ಎಂದು ಮತ್ತೊಮ್ಮೆ ಹೋಗಿ ಮೂರ್ಖಳಂತೆ ಪರೀಕ್ಷಿಸಿದ್ದೆ. ಒಟ್ಟಿನಲ್ಲಿ ಕರ್ವಾಲೋ ಕೃತಿ, ಕೃತಿಯಲ್ಲಿನ ಪಾತ್ರಗಳು, ಸನ್ನಿವೇಶಗಳು ಮನದಲ್ಲಿ ಅಚ್ಚಳಿದುಬಿಟ್ಟಿವೆ.

No comments:
Post a Comment