ಹೊಸತರ ಹುಡುಕಟದಲ್ಲಿ ಯುವ ಮನಸ್ಸುಗಳ ಸಂಚಾರ.... ನಿಮ್ಮ ಬರಹಗಳನ್ನು ಇಲ್ಲಿಗೆ ಕಳಿಸಿ.. mathinakatte@yahoo.com

ಸರಳ ಜೀವನ ಕಲಿಯಬೇಕು

ಬದುಕು 
ಕನಸುಗಳ  ದಿಬ್ಬಣ
ಅಲ್ಲಿ  ಸಿಹಿಯುಂಟು
ಜೊತೆಗೆ ಕಹಿಯುಂಟು
ಜೀವನ ತುಂಬ ಸರಳ ಇದನ್ನು ನಾವೇ ಸಂಕೀರ್ಣವಾಗಿಸಿದ್ದೇವೆ. ಬದುಕು ಸಂಬಂಧಗಳ ಸುತ್ತ ಹೆಣೆದಿರುವ ಕಥೆ. ಇಲ್ಲಿ ಸೋತು ಗೆಲ್ಲಬೇಕು ಬದುಕಿನ ಪ್ರತಿ ಸೋಲುಗಳನ್ನು ಸಂಭ್ರಮಿಸಬೇಕು. ಹಾಗೇ ನೋಡಿದರೆ ಸೋಲುಗಳೆ ನಮ್ಮನ್ನು ಗಟ್ಟಿಗೊಳಿಸುವುದು. ಬದುಕು ಎಂದರೆ ನದಿಯಂತೆ ಕೊನೆ ಇಲ್ಲದ ಪಯಣ. ಯಾವುದು ನಮ್ಮ ಜತೆ ಉಳಿಯುವುದಿಲ್ಲ ಉಳಿಯುವುದು ಒಂದೇ ನಾವು ಮಾಡಿದ ಪುಣ್ಯದ ಕೆಲಸ, ಜತೆಗೆ ಒಂದಿಷ್ಟು ನಾವು ತೋರಿದ ಮಾನವೀಯ ಪ್ರೇಮ..
       ಸಿಕ್ಕಿದ್ದನ್ನು ಕಳೆದುಕೊಂಡು ಸಿಗಲಾರದ್ದನ್ನು ಹುಡುಕುತ್ತ ಜೀವನ ಪೂರ್ತಿ ಅತೃಪ್ತಿ, ಅತುರ, ಧಾವಂತದಿಂದ ಬದುಕುವ ಬದಲು ವ್ಯಾಮೋಹ ತೊರೆದು .ತೃಪ್ತಿಯಿಂದ ಬದುಕುವುದೇ ಲೇಸು. ತೃಪ್ತಿಯೇ ನಿಜವಾದ ಶ್ರೀಮಂತಿಕೆ. ನಮ್ಮ ಬದುಕನ್ನೆ  ಗಮನಿಸಿ “ಆಟ ಆಡುವುದು, ಕೆಲಸ ಮಾಡುವುದು, ಮದುವೆ ಮಾಡಿಕೊಳ್ಳುವುದು, ಕುಟುಂಬ ನೋಡಿಕೊಳ್ಳುವುದು ಕೊನೆಗೊಂದು ದಿನ ವಯಸ್ಸಾಗಿ ಸಾಯುವುದು ಇಷ್ಟೇನಾ? ಬದುಕು. ನಮ್ಮ ಬದುಕಿಗೊಂದು ಅರ್ಥ ಸಿಗಬೇಕಾದರೆ  ನಾವು ಮೊದಲು ಅರ್ಥ ಗರ್ಭಿತವಾಗಿ ಬದುಕುವುದನ್ನು ಕಲಿಯಬೇಕು.

      ಓಮ್ಮೆ ಮಹಾ ಗಣಪತಿಯನ್ನು ಯಾರೋ ಭಕ್ತ ಕೇಳಿದನಂತೆ ದೇವ ನೀವು ಭೂಮಿಗೆ ಬಂದು ಇರುವುದೇ ಕೇವಲ 15 ದಿನಗಳು ಮಾತ್ರ ಆದರೂ ಇಷ್ಟು ಸಂತೊಷದಿಂದ ಇರುತ್ತಿರಲ್ಲಾ  ಕಾರಣ ಏನು  ಎಂದು. ಅದಕ್ಕೆ ಮಹಾ ಗಣಪತಿ ನನಗೆ ಬದುಕಿನ ಕಹಿ ಸತ್ಯ ತಿಳಿದಿದೆ. ಇಂದು ಯಾರು ನನ್ನನ್ನು ಹೊತ್ತು ಮರೆಸುತ್ತಿದ್ದಾರೂ, ಖುಷಿಯಂದ ಬಣ್ಣ ಬಣ್ಣದ ಅಲಂಕಾರ ಮಾಡಿ ಸಂಭ್ರಮಿಸುತ್ತಿದ್ದರೂ  ಅವರೇ ನಾಳೆ ನನ್ನನ್ನು ಮುಳುಗಿಸುತ್ತಾರೆ ಎಂದು. ಹಾಗಾಗಿ ನಾಳೆಯ ಚಿಂತೆ ಇಲ್ಲದೆ ಇಂದು ಈ ಕ್ಷಣವನ್ನು ಆನಂದಿಸುತ್ತಿದ್ದೇನೆ. ಇದೇ  ಬದುಕಿನ ಸತ್ಯ ನಾವು ಇಂದು ಯಾರು ನಮ್ಮವರು ಎಂದು ಕೊಳ್ಳುತ್ತೇವೂ ಅವರೇ ನಮ್ಮ ನಾಳೆಯ  ದುಃಖಕ್ಕೆ ಕಾರಣವಾಗುತ್ತಾರೆ. ಯಾವುದು ನಮ್ಮ ಆಸ್ತಿ  ಐಶ್ವರ್ಯ ಅಂದು ಕೊಂಡು ಜೀವ ಬಿಗಿ ಹಿಡಿದು ದುಡಿದಿರುತ್ತೇವೋ  ಅವುಗಳೇ ನಾಳೆ ನಮ್ಮ ದುಃಖಕ್ಕೆ ದಾರಿ ಮಾಡಿಕೊಡುತ್ತವೆ. ಕ್ಷಣಿಕ ಸುಖ ತೊರೆದು ಬದುಕು ಕಟ್ಟಿಕೊಳ್ಳಬೇಕು.
     ಅಗತ್ಯಕ್ಕಿಂತ ಹೆಚ್ಚು ಹಣ, ಸಂಪತ್ತು, ಆಸ್ತಿ ಹಿಂದೆ ಬೆನ್ನು ಹತ್ತಿ ಅಮೂಲ್ಯವಾದ ಜೀವನ ವ್ಯರ್ಥ ಮಾಡಿಕೊಳ್ಳುತ್ತಿದ್ದೇವೆ. ಬದುಕಿನ ಪುಟಗಳು ಇಂದ್ರಿಯಗಳ ಅರ್ಥ ಹೀನ ಸುಖದಲ್ಲಿ ಸವೆದು ಹೋಗುತ್ತವೆ. ಬದುಕಿಗೊಂದು ಅರ್ಥ ತರುವಲ್ಲಿ  ನಾವು ಎಡುವುತ್ತಿದ್ದೇವೆ. ಅಧುನಿಕ ಜೀವನ ಶೈಲಿಯ ಬದುಕು ನಮ್ಮ ಶಾಶ್ವತ ಸುಖವನ್ನು ನುಂಗುತ್ತಿದೆ. ಸ್ಫರ್ಧೆಯ ದಾವಂತದ ಓಟದಲ್ಲಿ ಓಡುತ್ತಿರುವ ನಾವು ದಿನಗಳು ಉರುಳುವುದನ್ನು ಗಮನಿಸಿಯೇ ಇಲ್ಲ ಬದುಕಿನ ಮುಪು ಆವರಿಸುವ ಮುನ್ನ  ಒಳ ಮನಸ್ಸು ಸಂಭ್ರಮದಿಂದ ಕೇಕೆ ಹಾಕುವಂತ ಬದುಕು ಕಟ್ಟಿಕೊಳ್ಳಬೇಕು. ಅದು ನಮ್ಮ ಕೈಯೊಳಗೆ ಇದೆ ಹಸನ್ಮುಖಿಯಾಗಿ ಯೊಚಿಸ ಬೇಕು ಅಷ್ಟೆ.
-ಪ್ರಸನ್ನಕುಮಾರ್ ಸುರೆ. ಬಾಣಾವರ 

No comments:

Post a Comment