ಹೊಸತರ ಹುಡುಕಟದಲ್ಲಿ ಯುವ ಮನಸ್ಸುಗಳ ಸಂಚಾರ.... ನಿಮ್ಮ ಬರಹಗಳನ್ನು ಇಲ್ಲಿಗೆ ಕಳಿಸಿ.. mathinakatte@yahoo.com

ಆತ್ಮ ಸಂತೋಷಕ್ಕಾಗಿ ಹುಡುಕಾಟ

ರೂಪ ಆಕ್ಯೆ ಒಂದು ಇಲ್ಲದಾ ವಸ್ತುವಿಗೆ

ಒಗಿಸ್ಸು ಮನವ ಆ ಕಡೆ ಮಂಕುತಿಮ್ಮ
          ಸುಖ, ಸಂತೋಷ, ನೆಮ್ಮದಿ ಎಂದರೆ ರೂಪ ವಿಲ್ಲದ ಆಕಾರ ವಿಲ್ಲದ ಮನಸ್ಸಿನ ಭಾವನೆ ಭಂಗವಂತ ಎಲ್ಲವನ್ನು ನಮ್ಮಳೂಗೆ ಇಟ್ಟದ್ದಾನೆ ಅದರ ಅರಿವು ಇಲ್ಲದಾ ಮನುಷ್ಯ ಸಂತೋಷವನ್ನ ವಸ್ತುಗಳಲ್ಲಿ ಹುಡುಕುತ್ತಾ ಕೊನೆಯವರೆಗೂ
ನೆಮ್ಮದಿ ಸಿಗದೆ ನರಳಾಟದಲ್ಲಿ ಬದುಕನ್ನ ದೂಡುತ್ತಾ ಇದ್ದಾನೆ. ಅದಕ್ಕಾಗಿಯೇ ಇಂದು ಏನು ದಕ್ಕಿರು ನಮಿಗೆ ಸಂತೋಷನೇ ಆಗಲ್ಲ ಇನ್ನೂ ಏನೋ ಬೇಕು ಅನ್ನೋ ಧಾವಂತ, ಮತ್ತೆ ಏನೋ ಹುಡುಕೋ ಹಂಬಲ ಕಾರಣ ಇಷ್ಟೆ ನಾವು ಹುಡುಕುತ್ತಿರುವ ಆತ್ಮ ಸಂತೋಷ ವಸ್ತುಗಳಲ್ಲಿ ಇಲ್ಲ ನಮ್ಮೊಳಗೆ ಇದೆ. ಅದನ್ನು ತಿಳಿಯುವ ಸೂಕ್ಷತೆಯನ್ನು ನಾವು ಕಳೆದುಕೊಳ್ಳುತ್ತಾಯಿದ್ದಿವೆ.

          ಈಜಿಷ್ಟ್ ದೇಶದ ಒಂದು ಕತೆ ಒಬ್ಬ ಕಟ್ಟಿಗೆ ಮಾರುವನಿದ್ದ ತುಂಬಾ ಬಡತನ ಕಟ್ಟಿಗೆ ಮಾರಿಯೇ ಜೀವನ ನಡೆಸಬೇಕಾಗಿತ್ತು. ವಯಸ್ಸು ಬೇರೆ ಆಗಿದೆ. ಮೊದಲು ಕಾಡು ಊರಿಗೆ ಹತ್ತಿರವೇ ಇತ್ತು ಈಗ ಸಾಕಷ್ಟು ಬದಲಾಗಿದೆ ಜನ ಹೆಚ್ಚಿದ್ದರಿಂದ ಕಾಡು ದೂರ ಹೋಗಿದೆ. ಒಣ ಕಟ್ಟಿಗೆ ಸಿಗೋದೆ ಕಷ್ಟವಾಗಿತ್ತು ಅವನಿಗೂ ಶಕ್ತಿ ಕುಂದಿರೋದರಿಂದ ದೊಡ್ಡ ದೊಡ್ಡ ಹೊರೆ ಮಾಡೋಕೆ ಆಗುತ್ತಿರಲಿಲ್ಲ. ಇದರಿಂದ ಅವನಿಗೆ ಬದುಕಿನಲ್ಲಿ ನಿರಾಸೆ ಆರಂಭವಾಗಿ ಎಷ್ಟು ದಿವಸವಪ್ಪ ನನ್ನ ಜನ್ಮ ಹೀಗೆ? ಅಂತ ಅಂದುಕೊಂಡು ಜೀವನ ಸಾಗಿಸುತ್ತಿದ್ದ. ಒಮ್ಮೆ ಕಾಡಿನೊಳಗೆ ಹೋದ ಈ ಕಾಡು ಸಾಕಾಗಿದೆ ಅಂತ ಸ್ವಲ್ಪ ಮುಂದೆ ಹೋದ ಮುಂದೆ ಹೋದ್ರೆ ಒಂದು ಮರದ ಕೆಳಗೆ ಸನ್ಯಾಸಿ ಕುಳಿತ್ತಿದ್ದ ಆತ ಇವನನ್ನು ನೋಡಿ ಮರ ಬೇಕೇನೋ ಈ ಕಡೆ ಹೋಗು ಅಲ್ಲಿ ಬೇಕಾದಷ್ಟಿದೆ. ಸನ್ಯಾಸಿಯ ಮಾತಿನಂತೆ ಮರ ಕಡಿಯುವನು ಅಲ್ಲಿಗೆ ಹೋದ ಒಣ ಮರ ಬೇಕಾದಷ್ಟಿತ್ತು. ಎಲ್ಲವನ್ನು ನೋಡಿಬೇಕಾದಷ್ಟು ಹೊತ್ತುಕೊಂಡು ಬಂದ, ಶಕ್ತಿ ಮೀರಿ ಹೊತ್ತು ಕೊಂಡು ಬಂದ ಸ್ವಲ್ಪ ಕಾಸು ಹೆಚ್ಚಿಗೆ ಬಂತು.
          ಒಂದು ವಾರ, 15 ದಿವಸ ಹೀಗೆ ಆಯ್ತು ದಿನ ಸನ್ಯಾಸಿ ಇವನನ್ನು ನೋಡಿ ಮುಗುಳು ನಗುತ್ತಿದ್ದ. ಒಂದು ದಿನ ಕೇಳಿದ ಎಷ್ಟು ಮರ ಕಡಿತ್ತಿಯೋ ಪ್ರಾಣ? ಇಷ್ಟು ಮರ ಕಡಿದರೆ   ಏನೋ ಬಂದಿತು ನಿನಗೆ ಒಂದು ನಾಲ್ಕಾಣೆ ಅದನ್ನು ಬಿಡು ನಾನು ಬೇರೆ ಹಾದಿ ಹೇಳುತ್ತೀನಿ ಬಾ. ನೀನು ಬಲಗಡೆ ಹೋಗುತ್ತಿದ್ದಲ್ಲ ಈಗ ಅಲ್ಲಿ ಹೋಗಬೇಡ ಸೀದಾ ಹೋಗು ಅಲ್ಲಿ ಒಂದು ಅಶ್ವಥವೃಕ್ಷ ಬರುತ್ತೆ ಅದರ ಎಡಗಡೆ ತಿರುಗಿ ಮುಂದೆ ಹೋಗು ಅಲ್ಲಿ ತಾಮ್ರದ ಗಣಿ ಬರುತ್ತೆ ಕಟ್ಟಿಗೆ ಮಾರೋನಿಗೆ ಸಂಶಯ ಸನ್ಯಾಸಿಗೆ ಗೋತ್ತಿದ್ರೆ ಇವನೆ ತೆಗೆದುಕೊಳ್ಳಬಹುದಲ್ವಾ! ಅಲ್ಲಿಗೆ ಹೋಗಿ ನೋಡುತ್ತಾನೆ ತಾಮ್ರದ ಗಣಿ ಇರೋದು ನಿಜ ಮೇಲೆನೆ ತಾಮ್ರ ಮಿಂಚುತ್ತಾ ಇದೆ ಇದನ್ನು ಹೋರುದು ಹೇಗೆ ಊರಿಗೆ ಹೋದ ಒಂದು ಗಾಡಿ ಮಾಡಿಕೊಂಡು ಬಂದ ಗಾಡಿ ತುಂಬ ಏರಿºಕೊಂಡು ಹೋದ ಮಾರಿದ ಈ ಕಟ್ಟಿಗೆ ಮಾರಿರೆ ಏನು ಬರುತ್ತೆ ಒಂದು ವರ್ಷ ಕಟ್ಟಿಗೆ ಮಾರಿರೆ ಬರೋ ದುಡ್ಡು ಒಂದೇ ದಿನ ಬಂತು. ಮರು ದಿವಸ ಒಂದು ಲಾರಿ ಮಾಡಿಕೊಂಡು ಬಂದಾ ಯಾರು ಬೇಡ ಅನ್ನಲಿಲ್ಲ ತೆಗೆದುಕೊಂಡು ಹೋದ ತಾಮ್ರ ಮಾರಿದಾ ಮಾರಿದ ಬಾರಿ ಶ್ರಿಮಂತ ಆದ  15 ದಿವಸ ಆಯ್ತ ಮತ್ತೆ ಸನ್ಯಾಸಿ ಕೇಳಿದೆ ಎಷ್ಟು ತಾಮ್ರ ಮಾರುತ್ತಿಯೋ ತಾಮ್ರದಲ್ಲಿ ಏನಿದೆ ಲಾಭ ಹೇ ಬೇಕಾದಷ್ಟಿದೆ ಅಂದ ಕಟ್ಟಿಗೆ ಮಾರೋನು  ಹುಚ್ಚ ನೀನು ಅಶ್ವಥಮರದ ಎಡಗಡೆ ಹೋಗಿದ್ದೆ ತಾನೇ ಇವತ್ತು ಬಲಗಡೆ ಹೋಗು ಅಲ್ಲಿ ಬೆಳ್ಳಿ ರಾಶಿ ಇದೆ ತೆಗೆದುಕೊಂಡು ಹೋಗು ಅವನಿಗೆ ಆಶ್ವರ್ಯ ಹೌದಾ ಹೋಗಿ ಮೋಡಿತ್ತಾನೆ ಅಯ್ಯಾ ಕಳೆದ 15 ದಿನ ನಾನು ಸುಮ್ನೆ ತಾಮ್ರ ತೆಗಿತ್ತಾ ಹಾಳು ಮಾಡಿದೆ.
          ಅಂತ ಬೇಜಾರು ಮಾಡಿಕೊಂಡು ಅಲ್ಲಿ ಹೋದ  ಬೆಳ್ಳಿ ರಾಶಿಯಲ್ಲಿ ಬೆಳ್ಳಿ ತೆಗೆದ ಬೆಳ್ಳಿ ಬಾಚಿದ ಎನು ಕೋಟ್ಯಾಧಿಶ್ವರ ಆದ. ಮತ್ತೆ 15 ದಿನ ಕಳಿತು ಸನ್ಯಾಸಿ ಮತ್ತೆ ಕರೆದ ಸಾಕೇನು ಬೆಳ್ಳಿ ಬೇಕಾದಷ್ಟಿದೆ ಅಂದ ಇನ್ನೂ ಏನಿದೆ ಅಂತ ಕೇಳಿದ ಅದಕ್ಕೆ ಸನ್ಯಾಸಿ ನಿನು ಎಡಗಡೆ ಬಲಗಡೆ ಹೋಗೋದು ಬಿಡು ಮುಂದೆ ಹೋಗು ಅಲ್ಲಿ ಒಂದು ದೊಡ್ಡ ವೃಕ್ಷ ಇದೆ ಮಾವಿನ ಮರ ಅದರ ಹಿಂದೆ ಹೋದರೆ ಬಂಗಾರದ ಗುಡ್ಡೆ ಇದೆ ಹೌದಾ ಅಂತ ಅಲ್ಲಿ ಹೋಗಿ ನೋಡಿದ ಬಂಗಾರದ ಗುಡ್ಡೆ ಇತ್ತು ಅದನ್ನು ತೆಗೆದುಕೊಂಡು ಹೋದ ಆ ಏರಿಯದಾ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಬಾರಿ ಶ್ರೀಮಂತನಾದ ಹೀಗೆ 6 ತಿಂಗಳು ಕಳಿತು ಒಮ್ಮೆ ಯೋಚಿಸಿದ ಸನ್ಯಾಸಿ ನನಗೆ ಎಲ್ಲಾವನ್ನು ತೋರಿಸಿದ ಪಾಪ ಅವನಿಗೆ ಏನೋ ಕೊಟ್ಟಲ್ಲ ಮತ್ತೆ ಅವನಿಗೆ ಒಂದು ಸಂಶಯನು ಬರೋಕೆ ಶುರುವಾಯಿತು ಇರೋದೆಲ್ಲಾ ಅವನಿಗೆ ಗೊತ್ತಿದ್ದರೂ ನನಗೆ ಯಾಕೆ ಕೊಟ್ಟ ಸನ್ಯಾಸಿಗೆ ತಾಮ್ರ, ಬೆಳ್ಳಿ, ಚಿನ್ನ ಇರೋದು ಗೊತ್ತಿದೆ ಅದ್ರೆ ಮತ್ತೆ ಯಾಕೆ ತೆಗೆದುಕೊಳ್ಳಲಿಲ್ಲ ಅಂತ ಯೋಚಿಸಿ ಹೋಗಿ ಕೇಳಿದ.
          ನನಗೆ ಒಂದು ಸಂಶಯ ಬಂದಿದೆ ನಿಮಿಗೆ ಎಲ್ಲಾ ಗೋತಿತ್ತು ನಿವು ಯಾಕೆ ತೆಗೆದುಕೊಳ್ಳಲಿಲ್ಲ ಸನ್ಯಾಸಿ ಹೇಳಿದ ಹುಚ್ಚ ನನಗೆ ವಜ್ರದ ಗಣಿ ಸಿಕ್ಕಿದೆ ಇದನ್ನ ಯಾಕೆ ಇಟ್ಟುಕೊಂಡು ಕುಳಿತುಕೋಳಲಿ ಆದರೆ ವಜ್ರದ ಗಣಿ ಹೊರಗೆ ಇಲ್ಲಪ್ಪ ಒಳಗೆ ಇದೆ. ನನಗೆ ಅದನ್ನು ಹುಡುಕಿದಷ್ಟು ಸಂತೋಷ ಕೊಡುತ್ತೆ ನಿನು ತಾಮ್ರ ಮಾರಿದಾಗ ಬೆಳ್ಳಿ ಮಾರಿದಾಗ ಚಿನ್ನ ಮಾರಿದಾಗ ಸಂತೋಷ ಆಯ್ತಲ್ಲಿ ನಿನಗೆ, ಅದರ ಲಕ್ಷ ಪಟ್ಟು ಸಂತೋಷ ನನಗೆ ಸಿಕ್ಕಿದೆ ನಿನಗೆ ಮಾರಿದಾಗ ಮಾತ್ರ ಸಂತೋಷ  ಸಿಗುತ್ತೆ ನನಗೆ ಮಾರಿದೇ ಹೋದ್ರು ಸಿಗುತ್ತೆ ಇನ್ನೊಂದು ನಿನಗೆ ತಾಮ್ರಕ್ಕಿಂತ ಬೆಳ್ಳಿ ಮಾರಿದಾಗ ಸಂತೋಷ ಹೆಚ್ಚಾಯಿತ್ತಲ್ಲಾ ಬೆಳ್ಳಿಗಿಂತ ಚಿನ್ನ ಮಾರಿದಾಗ ಸಂತೋಷ ಹೆಚ್ಚಾಯಿತ್ತಲ್ಲಾ ನನಗೆ ಯಾವಾಗಲೂ ಹೆಚ್ಚು ಕಡಿಮೆ ಆಗೋದೆ ಇಲ್ಲ ಜೀವನ ಪೂರ್ತಿ ಒಂದೇ ಥರ ಅವನು ತಕ್ಷಣ ಹೇಳಿದನಂತೆ ಸ್ವಾಮಿ ನನಗೆ ಇನ್ನ ಮೇಲೆ ಗಣಿ ತೋರಿಸಬೇಡಿ ಸಂತೋಷ ಪಡು ಹೋಗುವ ದಾರಿ ತೋರಿಸಿ.
          ಹಾಗೆ ನಮ್ಮಲ್ಲೂ ಕೂಡ ತಾಮ್ರ, ಬೆಳ್ಳಿ, ಚಿನ್ನದ ಗಣಿ ಹೊರಗಡೆ ಇದ್ದರೆ ಜ್ಞಾನ ಅನ್ನು ಗಣಿ ಒಳಗಡೆ ಇದೆ ಸಂತೋಷ ನಮ್ಮಳಗಡೆ ಇದೆ ಅದನ್ನು ಹುಡುಕುವ ವ್ಯವಧಾನ ಬಹಳ ಮುಖ್ಯ. ನಾವು ಮಕ್ಕಳಾಗಿದ್ದಾಗ ಸಣ್ಣ ಸಣ್ಣ ವಿಷಯಗಳು ನಮಿಗೆ ಬಹಳ ಮುದ ನೀಡುತ್ತಿದ್ದವು ಆದರೆ ಈಗ ದೊಡ್ಡರಾಗುತ್ತಾ ಆಗುತ್ತಾ ನಮ್ಮೋಳಗಿನ ಆನಂದ ಕಡಿಮೆಯಾಗುತ್ತಿದ್ದೇಯೇನೋ, ಬದುಕಿನಲ್ಲಿ ಬರೋ ಎಲ್ಲ ಸಂತೋಷಗಳು ನಮಿಗೆ ಕ್ಷಣಿಕವಾಗುತ್ತಿವೆ. ಪ್ರತಿ ನಾಳೆನೂ ಹೊಸ ಆಸೆ ಹೊಸ ಸಂತೋಷಕ್ಕಾಗಿ ಹೋರಾಡೋದೆ ಆಗಿದೆ. ಒಂತ್ತಾರ ಜಂಜಾಟದಲ್ಲಿ ಬದುಕು ಕಳೆದುಹೋಗುತ್ತಿದೆ. ಬದುಕು ಮುಗಿಸುವ ಮುನ್ನ ಶಾಶ್ವತ ಸುಖಕ್ಕಾಗಿ ಭಗವಂತನಲ್ಲಿ ಶರಣಗಿ ಬಿಡಬೇಕು ನಮ್ಮ ಯೋಗ್ಯತೆಗೆ ತಕ್ಕಷ್ಟು ಆವ ಕೊಡುತ್ತಾನೆ. ಅವನು ಕೊಟ್ಟಿದ್ದಕ್ಕೆ ತೃಷ್ತಿ ಪಡೋ ಮನಸ್ಸು ನಮ್ಮದಾಗಬೇಕು ಅಷ್ಟೆ.  
           -ಪ್ರಸನ್ನಕುಮಾರ್ ಸುರೆ,ಬಾಣಾವರ

2 comments:

  1. ಒಳ್ಳೆಯ ಅಧ್ಬುತ ವಿಚಾರ ನಮ್ಮ ನೆಮ್ಮದಿ ಸಂತೋಷ ನಮ್ಮ ಕೈಯಲ್ಲಿ

    ReplyDelete
  2. Beautiful story'
    Allama prubhu sharanaru helidante ninna odave ಜ್ಞಾನ anta helida vachana nenapu bantu...

    ReplyDelete